ಕರ್ನಾಟಕ

karnataka

ETV Bharat / state

ಎಂಇಎಸ್ ನಾಯಕರು ನಮ್ಮ ಸಹೋದರರಂತೆ: ಸಂಸದ ಅನಂತಕುಮಾರ್ ಹೆಗಡೆ - ಬೆಳಗಾವಿ

ಎಂಇಎಸ್ ನಾಯಕರ ಪರ ಬ್ಯಾಟಿಂಗ್ ಮಾಡುವ ಮೂಲಕ ಸಂಸದ ಅನಂತಕುಮಾರ್ ಹೆಗಡೆ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

MP Ananthakumar Hegde
ಸಂಸದ ಅನಂತಕುಮಾರ್ ಹೆಗಡೆ

By

Published : Sep 8, 2020, 1:44 PM IST

Updated : Sep 8, 2020, 2:26 PM IST

ಬೆಳಗಾವಿ: ಎಂಇಎಸ್ ನಾಯಕರು ನಮ್ಮ ಸೋದರರಿದ್ದಂತೆ ಎಂದು ಉತ್ತರ ‌ಕನ್ನಡ ಸಂಸದ ಅನಂತಕುಮಾರ ಹೆಗಡೆ ಹೇಳಿದ್ದಾರೆ.

ಎಂಇಎಸ್ ನಾಯಕರು ನಮ್ಮ ಸಹೋದರರಂತೆ: ಸಂಸದ ಅನಂತಕುಮಾರ್ ಹೆಗಡೆ

ಎಂಇಎಸ್ ನಾಯಕರ ಪರ ಬ್ಯಾಟಿಂಗ್ ಮಾಡುವ ಮೂಲಕ ಸಂಸದರು ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ. ಖಾನಾಪುರ ಕ್ಷೇತ್ರದಲ್ಲಿ ಒಂದು ಬಾರಿ ಮಾತ್ರ ಬಿಜೆಪಿ ಶಾಸಕ ಆಯ್ಕೆಯಾಗಿದ್ದರು. ಅದಕ್ಕೂ ಮುನ್ನ ಖಾನಾಪುರದಲ್ಲಿ ಎಂಇಎಸ್ ಆಯ್ಕೆಯಾಗುತ್ತಾ ಬಂದಿತ್ತು. ಇದರಿಂದ ನಮಗೆ ವ್ಯತ್ಯಾಸ ಆಗಿಲ್ಲ. ಆದರೆ ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಬಾರದಿತ್ತು ಎಂದರು.

ಕಳೆದ 15 ವರ್ಷಗಳಲ್ಲಿ ಖಾನಾಪುರಕ್ಕೆ ಭೂಮಿ ಪೂಜೆಗೆ ಅತ್ಯಂತ ಕಡಿಮೆ ಬಾರಿ ಬಂದಿದ್ದೇನೆ. ಏಕೆಂದರೆ ನಮ್ಮ ಸಹೋದರರಂತಿದ್ದ ಎಂಇಎಸ್‌ನವರು ಭೂಮಿ ಪೂಜೆ ಮಾಡುತ್ತಿದ್ದರು. ಅವರು ಭೂಮಿ ಪೂಜೆ ಮಾಡಿದರೇನು, ನಾನು ಮಾಡಿದರೇನು ವ್ಯತ್ಯಾಸ ಇರುತ್ತಿರಲಿಲ್ಲ. ಆದರೆ ಈಗ ಅನಿವಾರ್ಯತೆ ಇದೆ. ನಾವೇ ಭೂಮಿ ಪೂಜೆ ಮಾಡಬೇಕಾಗಿದೆ ಎಂದರು.

ಸೋದರತ್ವ ಸಂಬಂಧ ತಿಳಿಯುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್​ನವರಿಲ್ಲ. ಸೋದರತ್ವದ ಸಂಬಂಧ ಸೋದರರ ಜೊತೆ ಇರುತ್ತದೆ ಎನ್ನುವ ಮೂಲಕ ಎಂಇಎಸ್ ಪರ ಸಂಸದ ಅನಂತಕುಮಾರ್ ಹೆಗಡೆ ಬ್ಯಾಟಿಂಗ್ ಮಾಡಿದರು.

Last Updated : Sep 8, 2020, 2:26 PM IST

ABOUT THE AUTHOR

...view details