ಬೆಳಗಾವಿ: ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ವಜಸ್ತಂಭ ತೆರವು ಮಾಡಬೇಕು ಎಂದು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸುವ ಮೂಲಕ ಎಂಇಎಸ್ ಕಾರ್ಯಕರ್ತರು ಉದ್ಧಟತನ ಪ್ರದರ್ಶಿಸಿದ್ದಾರೆ.
ಕನ್ನಡ ಧ್ವಜಸ್ತಂಭ ತೆರವಿಗೆ ಎಂಇಎಸ್ ಗಡುವು ಎಂಇಎಸ್ ಮುಖಂಡ ಶುಭಂ ಶೆಲ್ಕೆ ನೇತೃತ್ವದ ನಿಯೋಗ, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿತು.
ಓದಿ: ಬೆಳಗಾವಿ : ಅಲುಗಾಡದೇ, ಅಂಜದೇ ಧ್ವಜಸ್ತಂಭ ಕಾದು ಕುಳಿತ ಕನ್ನಡಪರ ಹೋರಾಟಗಾರರು..
ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಗೆ ಕನ್ನಡಪರ ಸಂಘಟನೆಗಳು ಅವಮಾನ ಮಾಡಿವೆ. ಹೀಗಾಗಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಡಿ.31ರೊಳಗೆ ಕನ್ನಡ ಧ್ವಜಸ್ತಂಭವನ್ನು ತೆರವು ಮಾಡದಿದ್ದರೆ ಪಾಲಿಕೆ ಕಚೇರಿ ಮೇಲೆ ಭಗವಾಧ್ವಜ ಹಾರಿಸುವುದಾಗಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ಪಾಲಿಕೆ ಎದುರು ನಿನ್ನೆಯಷ್ಟೇ ಕನ್ನಡಪರ ಹೋರಾಟಗಾರರು ಕನ್ನಡ ಧ್ವಜಸ್ತಂಭ ಸ್ಥಾಪಿಸಿದ್ದರು.