ಬೆಳಗಾವಿ: ನಗರದಲ್ಲಿ ಕನ್ನಡ ನಾಮಫಲಕ ಕುರಿತು ಜಾಗೃತಿ ಮೂಡಿಸುತ್ತಿರುವ ಕನ್ನಡಪರ ಸಂಘಟನೆಗಳ ಬಗ್ಗೆ ಎಂಇಎಸ್ ಕಾರ್ಯಕರ್ತರು ಕ್ಯಾತೆ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಕ್ಯಾತೆ: ಕನ್ನಡ ನಾಮಫಲಕ ಅಳವಡಿಕೆಗೆ ವಿರೋಧ - undefined
ಕನ್ನಡಪರ ಸಂಘಟನೆಗಳ ಬಗ್ಗೆ ಎಂಇಎಸ್ ಕಾರ್ಯಕರ್ತರು ಮತ್ತೆ ಉದ್ಧಟತನ ಮೆರೆದಿದ್ದು, ಕನ್ನಡ ನಾಮಫಲಕ ಹಾಕಲು ವಿರೋಧ ವ್ಯಕ್ತಪಡಿಸಿದ್ದಾರೆ.
![ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಕ್ಯಾತೆ: ಕನ್ನಡ ನಾಮಫಲಕ ಅಳವಡಿಕೆಗೆ ವಿರೋಧ](https://etvbharatimages.akamaized.net/etvbharat/prod-images/768-512-3587186-thumbnail-3x2-bgm.jpg)
ಕನ್ನಡ ನಾಮಫಲಕ ಅಳವಡಿಕೆಗೆ ವಿರೋಧ
ಕನ್ನಡಪರ ಹೋರಾಟಗಾರು ಆರ್.ಪಿ.ಡಿ ವೃತ್ತದಲ್ಲಿರುವ ಎಲ್ಲಾ ಅಂಗಡಿಗಳಲ್ಲಿ ಕನ್ನಡ ಅಭಿಯಾನ ನಡೆಸಿದ್ದರು. ಮರಾಠಿ, ಇಂಗ್ಲಿಷ್ ಭಾಷೆಯಲ್ಲಿರುವ ನಾಮಫಲಕ ಬದಲಾಗಿ ಕನ್ನಡ ಫಲಕ ಅಳವಡಿಸುವಂತೆ ಜನರಿಗೆ ಮನವಿ ಮಾಡಿಕೊಂಡಿದ್ದರು.
ಇದಕ್ಕೆ ಪ್ರತೀಕಾರವಾಗಿ ಎಂಇಎಸ್ ಯುವಕರು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು. ಬೆಳಗಾವಿ ಹಾಗೂ ಮಹಾರಾಷ್ಟ್ರದ ಗಡಿ ವಿಚಾರ ಸುಪ್ರೀಂ ಕೋರ್ಟಿನಲ್ಲಿದೆ. ಹೀಗಾಗಿ ಕರವೇ ಕಾರ್ಯಕರ್ತರು ದಬ್ಬಾಳಿಕೆ ಮಾಡಿ, ಮರಾಠಿ ನಾಮಫಲಕವನ್ನು ತೆರವುಗೊಳಿಸುತ್ತಿದ್ದಾರೆ ಎಂದು ಆರೋಪಿಸಿ ಫೇಸ್ಬುಕ್ ಲೈವ್ನಲ್ಲಿ ಕನ್ನಡ ಅಭಿಯಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.