ಬೆಳಗಾವಿ: ಮಹಾನಗರ ಪಾಲಿಕೆ ಚುಮಾವಣೆಗೆ ಮರು ಮತದಾನ ನಡೆಸುವಂತೆ ನಾಡದ್ರೋಹಿ ಎಂಇಎಸ್ ಪಕ್ಷದ ಮುಖಂಡರು ತಡರಾತ್ರಿ ಡಿಸಿ ಮನೆಯ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಮರು ಮತದಾನ ನಡೆಸುವಂತೆ ಎಂಇಎಸ್ ಕಿರಿಕ್; ತಡರಾತ್ರಿ ಡಿಸಿ ಮನೆ ಮುಂದೆ ಪ್ರತಿಭಟನೆ - belguam election
ವಿಶ್ವೇಶ್ವರಯ್ಯ ನಗರದಲ್ಲಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮನೆಯ ಮುಂದೆ ಜಮಾಯಿಸಿದ ನೂರಾರು ಎಂಇಎಸ್ ಮುಖಂಡರು, ಕಾರ್ಯಕರ್ತರು ಮರು ಮತದಾನ ನಡೆಸುವಂತೆ ಒತ್ತಾಯಿಸಿದ್ದಾರೆ.
ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿರುವ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮನೆಯ ಮುಂದೆ ಜಮಾಯಿಸಿದ ನೂರಾರು ಎಂಇಎಸ್ ಮುಖಂಡರು, ಕಾರ್ಯಕರ್ತರು ಮರು ಮತದಾನ ನಡೆಸುವಂತೆ ಒತ್ತಾಯಿಸಿದರು.
ಕೇವಲ ಎರಡು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಹೀನಾಯವಾಗಿ ಸೋತು ಕಂಗೆಟ್ಟಿರುವ ಮುಖಂಡರು ಇದೀಗ ಹೊಸ ವರಸೆ ಶುರು ಮಾಡಿದ್ದು, ಇವಿಎಂ ಮಷಿನ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗೆ ಪಾಲಿಕೆ ಫಲಿತಾಂಶ ತಡೆ ಹಿಡಿಯುವಂತೆ ಪುಂಡರು ಹೊಸ ರಾಗ ಹಾಡುತ್ತಿದ್ದಾರೆ. ವಾರ್ಡ್ ಮರು ವಿಂಗಡಣೆಯಿಂದ ಮತದಾರರ ಹೆಸರು ಬೇರೆ ಬೇರೆ ವಾರ್ಡುಗಳಲ್ಲಿ ಬಂದಿದೆ. ಹೀಗಾಗಿ ಬೆಳಗಾವಿ ಮಹಾನಗರ ಪಾಲಿಕೆಗೆ ಮರು ಮತದಾನ ನಡೆಸಬೇಕು ಎಂದು ಆಗ್ರಹ ಮಾಡಿದ್ದಾರೆ.