ಚಿಕ್ಕೋಡಿ:ನರೇಂದ್ರ ಮೋದಿಯವರು 2014 ರಲ್ಲಿ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕುವೆ ಎಂದಿದ್ದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ಆದರೆ, ಯಾವ ಉದ್ಯೋಗವೂ ಸೃಷ್ಟಿಯಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಚಿವ ಎಂ.ಬಿ ಪಾಟೀಲ್ ಹರಿಹಾಯ್ದಿದ್ದಾರೆ.
ಮೋದಿ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕುವೆ ಎಂದಿದ್ದರು: ಹಣ ಎಲ್ಲಿ ಎಂದು ಎಂಬಿಪಿ ಪ್ರಶ್ನೆ? - Chikodi congress conference
ಮೋದಿ ಅವರು ನೋಟ್ ಬ್ಯಾನ್ ಮಾಡುವ ಮೂಲಕ ಹಳೆ ಉದ್ಯೋಗವನ್ನೂ ಸಹ ಕಸಿದುಕೊಂಡರು ಎಂದು ಮೋದಿ ವಿರುದ್ಧ ಮಾಜಿ ಸಚಿವ ಎಂ.ಬಿ ಪಾಟೀಲ್ ಹರಿಹಾಯ್ದಿದ್ದಾರೆ.
ಚಿಕ್ಕೋಡಿಯ ಕಾಂಗ್ರೆಸ್ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿ ಅವರು ನೋಟ್ ಬ್ಯಾನ್ ಮಾಡುವ ಮೂಲಕ ಹಳೆ ಉದ್ಯೋಗವನ್ನೂ ಸಹ ಕಸಿದುಕೊಂಡರು. ಅಚ್ಚೇ ದಿನ ಆಯೇಗಾ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂದಿದ್ದರು ಇದರಿಂದ ಇನ್ನುವರೆಗೂ ಯಾರ ಹೊಟ್ಟೆಯೂ ತುಂಬಿಲ್ಲ. ಎಪಿಎಂಸಿ ಕಾಯ್ದೆಯಿಂದ ರೈತರ ಜಮೀನನ್ನ ಇನ್ನು ವ್ಯಾಪಾರಸ್ಥರು ಖರೀದಿಸಬಹುದು. ಇದರಿಂದ ಸಣ್ಣ ರೈತರು ಕೂಲಿ ಮಾಡಬೇಕಾಗುತ್ತೆ ಎಂದರು.
ಗೋ ಹತ್ಯೆ ವಿಚಾರವಾಗಿ ಮಾತನಾಡಿದ ಅವರು, ನಾವು ಗೋ ಹತ್ಯೆ ಕಾಯ್ದೆ ಪರವಾಗಿಯೇ ಇದ್ದೇವೆ. ಆದರೆ, ಈ ಕಾಯ್ದೇ ದೇಶದ ಎಲ್ಲ ರಾಜ್ಯದಲ್ಲಿ ಜಾರಿಯಾಗಬೇಕು. ಬೀಫ್ ರಫ್ತು ನಿಷೇಧ ಮಾಡಿಸಬೇಕು. ಬೀಫ್ ರಫ್ತು ಮಾಡುವವರು ಹೆಚ್ಚನ ಸಂಖ್ಯೆಯಲ್ಲಿ ಹಿಂದೂಗಳೇ ಇದ್ದಾರೆ. ಗೋ ಮಾಂಸ ಹೊರ ದೇಶಕ್ಕೆ ಕಳಿಸುವುದು ನಿಷೇಧ ಮಾಡಿ. ರಾಜಕೀಯವಾಗಿ ಅಷ್ಟೇ ಗೋ ಹತ್ಯೆ ಬ್ಯಾನ್ ಮಾಡಬೇಡಿ ಎಂದು ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಮಾತಿನ ವಾಗ್ದಾಳಿ ನಡೆಸಿದ್ದಾರೆ.