ಕರ್ನಾಟಕ

karnataka

ETV Bharat / state

ಕರ್ನಾಟಕ ರೈಲ್ವೆ ಯೋಜನೆಗಳು ವೇಗ ಪಡೆದಿದ್ದು ಸುರೇಶ್​ ಅಂಗಡಿ ಸಚಿವರಾದ ನಂತರ: ಚಂದ್ರಶೇಖರ ಶ್ರೀ - May Suresh Angadi

ಕೇಂದ್ರ ರೈಲ್ವೆ ಸಚಿವ ಸುರೇಶ್​ ಅಂಗಡಿಯವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮೀಜಿ ಹೇಳಿದ್ದಾರೆ.

Chandrasekhar Mahaswamiji
ಚಂದ್ರಶೇಖರ ಮಹಾಸ್ವಾಮೀಜಿ: ಹುಕ್ಕೇರಿ ಹಿರೇಮಠ

By

Published : Sep 24, 2020, 2:45 PM IST

ಚಿಕ್ಕೋಡಿ: ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿರುವ ಕೇಂದ್ರ ರೈಲ್ವೆ ಸಚಿವ ಸುರೇಶ್​ ಅಂಗಡಿಯವರು ನಿಧನರಾಗಿರುವ ಸುದ್ದಿ ಕೇಳಿ ತುಂಬಾ ದುಃಖ ಎನಿಸುತ್ತದೆ.‌ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮೀಜಿ ತಿಳಿಸಿದ್ದಾರೆ.

ಚಂದ್ರಶೇಖರ ಮಹಾಸ್ವಾಮೀಜಿ: ಹುಕ್ಕೇರಿ ಹಿರೇಮಠ

ಹುಕ್ಕೇರಿ ಮಠದಲ್ಲಿ ಸುರೇಶ್​ ಅಂಗಡಿಯವರ ಸಾವಿಗೆ ಸಂತಾಪ ಸೂಚಿಸಿದ ಅವರು, ಸುರೇಶ ಅಂಗಡಿ ಅವರು ಮೂರು ಬಾರಿ ಸಂಸದರಾಗಿ ಜನ ಪರ ಕೆಲಸಮಾಡಿ ನಾಲ್ಕನೇ ಬಾರಿ ಸಂಸದರಾದಾಗ ನರೇಂದ್ರ ಮೋದಿ ಅವರು ಇವರನ್ನು ಕರೆದು ಸಚಿವ ಸ್ಥಾನ ನೀಡಿದರು. ಕರ್ನಾಟಕದ ಅನೇಕ ರೈಲ್ವೆ ಕಾರ್ಯಗಳು ಇವರ ಬಂದ ನಂತರ ಬಹಳ ವೇಗವಾಗಿ ಅನೇಕ ಹೊಸ ರೈಲುಗಳನ್ನು ನೀಡಿರುವ ಕೀರ್ತಿ ಸುರೇಶ್​ ಅಂಗಡಿ ಅವರಿಗೆ ಸಲ್ಲುತ್ತದೆ.

ಎಲ್ಲರಕ್ಕಿಂತ ಹೆಚ್ಚಾಗಿ ನಮ್ಮ ಹುಕ್ಕೇರಿಯ ಹಿರಿಯ ಮಠದ ಅಪಾರ ಪ್ರೀತಿ. ಒಬ್ಬ ಮನುಷ್ಯ ಚಿಕ್ಕ ಹುದ್ದೆಗೆ ಹೋದರನು ಕೂಡಾ ಅಹಂಕಾರವಿರುತ್ತದೆ‌. ಪೋನ್​ ಮಾಡಿದರು ಪೋನ್​ ರಿಸೀವ್ ಮಾಡುವುದಿಲ್ಲ. ಆದರೆ, ಸುರೇಶ ಅಂಗಡಿ ಹಾಗಲ್ಲ. ಎಂತಹ ಸಂಧರ್ಭದಲ್ಲಿ ಪೋನ್​ ಮಾಡಿದರೆ ಅಜ್ಜಾರಿ ಎಲ್ಲಿ ಅದೀರಿ ನಾನು ಮಠಕ್ಕೆ ಬಂದ ಹೋಗತ್ತೀನಿ ಬಂದು ಆಶೀರ್ವಾದ ತೆಗೆದುಕೊಂಡು ಹೋಗುತ್ತೇನೆ ಎನ್ನುವ ಒಂದು ಶ್ರದ್ದೆ ಇವರಲ್ಲಿತ್ತು ಎಂದರು.

ಇವರ ಅಗಲಿಕೆ ತುಂಬಲಾರದಷ್ಟು ನಷ್ಟ. ಇಂತಹ ಅಪರೂಪದ ವ್ಯಕ್ತಿಗೆ ಈ ಸಾವು ಬರಬಾರದಾಗಿತ್ತು. ಇವರ ಅಗಲಿಕೆಯ ನೋವನ್ನು ಕುಟುಂಬದವರು ಸಮಾಧಾನದಿಂದ ಸ್ವೀಕರಿಸಬೇಕು. ಇವರ ಸಾವಿನಿಂದ ನಮ್ಮಗೂ‌ ಕೂಡಾ ವ್ಯಯಕ್ತಿಕವಾಗಿ ತುಂಬಾ ನೋವಾಗಿದೆ. ಇವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದರು.

ABOUT THE AUTHOR

...view details