ಕರ್ನಾಟಕ

karnataka

ಸದ್ಯಕ್ಕೆ ಮಾಸ್ಕ್ ಕಡ್ಡಾಯವಿಲ್ಲ: ಮಾಸ್ಕ್ ಧರಿಸಲು ಸಲಹೆ ನೀಡಿದ್ದು, ಪರಿಸ್ಥಿತಿ ನೋಡಿ ನಿರ್ಧಾರ ಎಂದ ಕೆ ಸುಧಾಕರ್

By

Published : Dec 23, 2022, 12:02 PM IST

ಪರಿಸ್ಥಿತಿ ನೋಡಿಕೊಂಡು ಮಾಸ್ಕ್ ಕಡ್ಡಾಯ ಮಾಡುತ್ತೇವೆ. ಸದ್ಯಕ್ಕೆ ಕಡ್ಡಾಯ ಮಾಡಿಲ್ಲ, ಮಾಸ್ಕ್ ಹಾಕುವಂತೆ ಸಲಹೆ ಕೊಟ್ಟಿದ್ದೇವೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದರು. ‌

ಆರೋಗ್ಯ ಸಚಿವ ಡಾ ಕೆ ಸುಧಾಕರ್
ಆರೋಗ್ಯ ಸಚಿವ ಡಾ ಕೆ ಸುಧಾಕರ್

ಬೆಂಗಳೂರು/ಬೆಳಗಾವಿ: ಸದ್ಯಕ್ಕೆ ಮಾಸ್ಕ್ ಕಡ್ಡಾಯವಿಲ್ಲ, ಪರಿಸ್ಥಿತಿ ನೋಡಿ ಮುಂದೆ ನಿರ್ಧಾರ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದರು. ‌ ಬೆಳಗಾವಿ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ವಿಚಾರವಾಗಿ ಮಾತನಾಡಿ, ಪರಿಸ್ಥಿತಿ ನೋಡಿಕೊಂಡು ಮಾಸ್ಕ್ ಕಡ್ಡಾಯ ಮಾಡುತ್ತೇವೆ.

ಸದ್ಯಕ್ಕೆ ಕಡ್ಡಾಯ ಮಾಡಿಲ್ಲ, ಮಾಸ್ಕ್ ಹಾಕುವಂತೆ ಸಲಹೆ ಕೊಟ್ಟಿದ್ದೇವೆ. ಪ್ರಧಾನಿ ಮೋದಿ, ಸಚಿವರು, ಸಂಸತ್ ಅಧಿವೇಶನದಲ್ಲಿ ಮಾಸ್ಕ್ ಹಾಕಿ ಆದರ್ಶ ಮೆರೆದಿದ್ದಾರೆ. ಇಡೀ ದೇಶ ಅವರನ್ನು ಪಾಲನೆ ಮಾಡಬೇಕು ಎಂದರು.

ಬೂಸ್ಟರ್ ಡೋಸ್ ವೇಸ್ಟ್ ಆಗಿರುವ ವಿಚಾರವಾಗಿ ಮಾತನಾಡಿ, ಲಕ್ಷಾಂತರ ಡೋಸ್ ವೇಸ್ಟ್ ಆಗಿರುವ ಬಗ್ಗೆ ಗೊತ್ತಿಲ್ಲ. ಸ್ವಲ್ಪ ಮಟ್ಟಿಗೆ ಲಸಿಕೆ ವೇಸ್ಟ್ ಆಗಿದೆ. ಮೊದಲ ಎರಡು ಡೋಸ್ ಲಸಿಕೆಗೆ ಕೊಟ್ಟಷ್ಟು ಆಸಕ್ತಿಯನ್ನು ಬೂಸ್ಟರ್ ಡೋಸ್​ನತ್ತ ಜನರು ತೋರಿಸುತ್ತಿಲ್ಲ. ಕೋವಿಡ್ ಹೋಗಿದೆ ಎಂಬ ಮನಸ್ಥಿತಿಯಲ್ಲಿ ಜನರು ಇದ್ದಾರೆ. ಇವಾಗ ಚೀನಾ ಮತ್ತು ಕೆಲವು ದೇಶಗಳ ಪರಿಸ್ಥಿತಿ ನೋಡಿ ಮತ್ತೆ ಜನರು ಆಸಕ್ತಿಯಿಂದ ಲಸಿಕೆ ಪಡೆದುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಓದಿ:ಕೋವಿಡ್‌ ಸೋಂಕಿತರ ಪರೀಕ್ಷಾ ಮಾದರಿಗಳ ಜೀನೋಮ್‌ ಸೀಕ್ವೆನ್ಸಿಂಗ್‌ಗೆ ಕ್ರಮ: ಸಚಿವ ಸುಧಾಕರ್

ABOUT THE AUTHOR

...view details