ಬೆಳಗಾವಿ:ನಗರದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡ ಮಾಸ್ಕ್ ಡೇ ಆಚರಣೆಗೆ ಕೇಂದ್ರ ಸಚಿವ ಸುರೇಶ ಅಂಗಡಿ ಚಾಲನೆ ನೀಡಿದರು.
ಅಶೋಕ ವೃತ್ತದ ದಿಂದ ರಾಣಿ ಚೆನ್ನಮ್ಮ ವೃತ್ತದವರೆಗೂ ರ್ಯಾಲಿ ನಡೆಸಿ ಜನರಿಗೆ ಕೋವಿಡ್ 19 ಬಗ್ಗೆ ಜಾಗೃತಿ ಮೂಡಿಸಲಾಯಿತು.

ಕೇಂದ್ರ ರೈಲ್ವೆ ಇಲಾಖೆ ಸಹಾಯಕ ಸಚಿವ ಸುರೇಶ ಅಂಗಡಿ ಮಾತನಾಡಿ, ಪಿಎಂ ಮೋದಿಯವರ ಕರೆಯಂತೆ ಸಾರ್ವಜನಿಕರು ಮನೆಯಲ್ಲಿಯೇ ತಯಾರಿಸಿದ ಅಥವಾ ಖರೀದಿಸಿಯಾದರೂ ಮಾಸ್ಕ್ ಗಳನ್ನ ಧರಿಸುವ ಮೂಲಕ ತಮ್ಮ ಹಾಗೂ ಸಮಾಜದ ಸ್ವಾಸ್ಥ್ಯವನ್ನ ಕಾಪಾಡಬೇಕು ಎಂದರು.
ಇದಲ್ಲದೇ ಮಾಸ್ಕ್ ಧರಿಸದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಸಮಾಜದ ಆರೋಗ್ಯವನ್ನ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಆದ್ದರಿಂದ ಜಿಲ್ಲಾಡಳಿತ, ಪಿಎಂ ಮತ್ತು ಸಿಎಂ ನೀಡಿದ ಆದೇಶವನ್ನ ಕಾಪಾಡಿ ಸುರಕ್ಷಿತವಾಗಿರಬೇಕೆಂದರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಎಸ್‍ಬಿ ಬೊಮ್ಮನಹಳ್ಳಿ, ಪೋಲಿಸ್ ಕಮಿಷನರ್ ಲೋಕೇಶ್ ಕುಮಾರ, ಪೋಲಿಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ, ಜಿಲ್ಲಾ ಪಂಚಾಯತ್ ಸಿಇಓ ರಾಜೇಂದ್ರ, ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಇತರರು ಭಾಗವಹಿಸಿದ್ದರು.