ಬೆಳಗಾವಿ:ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗುತ್ತಿರುವ "ಕೋಟಿ ಕಂಠ ಗೀತಗಾಯನ" ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಬೆಳಗಾವಿ ಜಿಲ್ಲೆಯ 5,000 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಆಯ್ದ ಕನ್ನಡ ಗೀತೆಗಳನ್ನು ಕಲಿಸುವ ಮಹತ್ವದ ಕಾರ್ಯವನ್ನು ಮರಾಠಿ ಶಿಕ್ಷಕ ಹಾಗೂ ಸಮೂಹ ಗಾಯನದ ಶಿಕ್ಷಕರೆಂದು ಪ್ರಸಿದ್ಧರಾದ ವಿನಾಯಕ ಮೋರೆ ಮಾಡಿದ್ದಾರೆ.
ಅ 28 ರಂದು ನಡೆಯಲಿರುವ ಸಮೂಹ ಗೀತಗಾಯನ ಕಾರ್ಯಕ್ರಮದಲ್ಲಿ 5,000 ವಿದ್ಯಾರ್ಥಿಗಳು ಸುವರ್ಣ ಸೌಧದಲ್ಲಿಯೂ, ಇನ್ನುಳಿದವರು ಬೇರೆ ಬೇರೆ ಕಡೆ ಹಾಡಲಿದ್ದಾರೆ. ವಿನಾಯಕ ಮೋರೆ ಅವರು ನಗರದ ಬಿಎಡ್ ಕಾಲೇಜಿನ ಹಾಗೂ ಶಾಲೆಯ ವಿದ್ಯಾರ್ಥಿಗಳಿಗೆ ಈ ಹಾಡುಗಳನ್ನು ಕಲಿಸಿದ್ದಾರೆ.