ಬೆಳಗಾವಿ: ವೃದ್ಧನೋರ್ವ ಹಾವನ್ನು ಕೊರಳಲ್ಲಿ ಸುತ್ತಿಕೊಂಡು ಬಿಂದಾಸ್ ಆಗಿ ಸೈಕಲ್ ಸವಾರಿ ಮಾಡಿರುವ ಘಟನೆ ತಾಲೂಕಿನ ಹಂಗರಗಾ ಗ್ರಾಮದಲ್ಲಿ ನಡೆದಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೊರಳಲ್ಲಿ ಹಾವನ್ನು ಸುತ್ತಿಕೊಂಡು ವೃದ್ಧನ ಸೈಕಲ್ ಸವಾರಿ ಹಾವು ಕಂಡರೆ ಸಾಕು ಮಾರುದ್ದ ಓಡಿ ಹೋಗುವ ಜನರೇ ಹೆಚ್ಚು. ಆದ್ರೆ, ಇಲ್ಲೋರ್ವ ವೃದ್ಧ ಹಾವನ್ನು ಯಾವುದೇ ರೀತಿ ಭಯ ಇಲ್ಲದೇ ಗಂಟೆಗಟ್ಟಲೇ ಕೊರಳಲ್ಲಿ ಹಾಕಿಕೊಂಡು ಸೈಕಲ್ ಸವಾರಿ ಮಾಡಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಶನಿವಾರ ಮಧ್ಯಾಹ್ನ ತಾಲೂಕಿನ ಹಂಗರಗಾ ಗ್ರಾಮದಲ್ಲಿ ಹಾವನ್ನು ಕೊರಳಿಗೆ ಹಾಕಿಕೊಂಡು ಸೈಕಲ್ ಸವಾರಿ ಮಾಡಿದ್ದಾನೆ. ಈ ಸಂದರ್ಭದಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ಯುವಕನೊಬ್ಬ ಈತನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ವೃದ್ಧನ ಧೈರ್ಯ ಕಂಡು ಜನರು ಬೆರಗಾಗಿದ್ದಾರೆ.
ಇದನ್ನೂ ಓದಿ:55 ವರ್ಷಗಳಿಂದ ಇದ್ದ ಸಣ್ಣ ಸೂರು ಆಸ್ಪತ್ರೆ ಮಾಲೀಕನಿಂದ ನೆಲಸಮ.. ಬೀದಿಗೆ ಬಿತ್ತು ವೃದ್ಧೆಯ ಬದುಕು!