ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಬಾಲಕನ ಕುತ್ತಿಗೆ ಸೀಳಿದ ಮಾಂಜಾ ದಾರ.. ದೀಪಾವಳಿ ಸಂಭ್ರಮದ ಮಧ್ಯೆ ಶೋಕ - ಬೆಳಗಾವಿಯಲ್ಲಿ ಬಾಲಕ ಸಾವು

ಮಾಂಜಾ ದಾರ ಕುತ್ತಿಗೆ ಸೀಳಿದ್ದರಿಂದ ಬಾಲಕ ಮೃತಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬಾಲಕ ಸಾವು‌‌
ಬಾಲಕ ಸಾವು‌‌

By

Published : Oct 23, 2022, 7:47 PM IST

ಬೆಳಗಾವಿ:ದೀಪಾವಳಿ ಹಬ್ಬದ ಅಂಗವಾಗಿ ಬೆಳಗಾವಿ ನಗರದಲ್ಲಿ ತಂದೆ ಜೊತೆ ಬಟ್ಟೆ ಖರೀದಿಸಿ ದ್ವಿಚಕ್ರ ವಾಹನದ ಮೇಲೆ ಊರಿಗೆ ಹೊರಟಿದ್ದಾಗ ಮಾಂಜಾ ದಾರ ಕುತ್ತಿಗೆ ಸೀಳಿ ಐದು ವರ್ಷದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಇಲ್ಲಿನ ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.

ಹುಕ್ಕೇರಿ ತಾಲೂಕಿನ ಯಮಕನಮರಡಿ ಸಮೀಪದ ಅನಂತಪುರ ಗ್ರಾಮದ ವರ್ಧನ ಈರಣ್ಣ ಬೇಲಿ(5) ಮೃತ ಬಾಲಕ. ದೀಪಾವಳಿ ಹಬ್ಬದ ನಿಮಿತ್ತ ಬೆಳಗಾವಿ ನಗರಕ್ಕೆ ತಂದೆ ಜೊತೆ ಬಂದು ಬಟ್ಟೆ ಖರೀದಿಸಿದ್ದರು. ಬಳಿಕ ದ್ವಿಚಕ್ರ ವಾಹನದ ಮೇಲೆ ತಂದೆ ಈರಣ್ಣ ಅವರೊಂದಿಗೆ ವರ್ಧನ ತಮ್ಮೂರಿಗೆ ಹೊರಟಿದ್ದ. ದ್ವಿಚಕ್ರ ವಾಹನದಲ್ಲಿ ಮುಂಭಾಗದಲ್ಲಿ ವರ್ಧನ ಕುಳಿತುಕೊಂಡಿದ್ದ.

ಓದಿ:ಸ್ಕೂಟಿಯಲ್ಲಿ ತೆರಳುತ್ತಿದ್ದ ಯುವತಿಯ ಕತ್ತು ಸೀಳಿತು ಚೀನಾದ ಮಾಂಜಾ..

ಈ ವೇಳೆ ಕಣ್ಣಿಗೆ ಕಾಣಿಸದ ಮಾಂಜಾ ದಾರ ನೇರವಾಗಿ ವರ್ಧನ ಕುತ್ತಿಗೆ ಸೀಳಿದ್ದರಿಂದ ಬಾಲಕ ಸ್ಥಳದಲ್ಲೇ ಅಸುನೀಗಿದ್ದಾನೆ. ಮಾಂಜಾ ದಾರವನ್ನು ನಿಷೇಧ ಮಾಡಿದ್ದರೂ ಇದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗ್ತಿದೆ. ಈಗ ಬಾಲಕನನ್ನು ಬಲಿ ಪಡೆದಿದೆ. ಮಾಂಜಾವನ್ನು ಸಂಪೂರ್ಣ ನಿಷೇಧಿಸಲು ಜಿಲ್ಲಾಡಳಿತ ಹಾಗೂ ಪೊಲೀಸರು ಅಗತ್ಯ ಕ್ರಮ ಜರುಗಿಸಬೇಕು ಎಂದು ಬಾಲಕನ ಸಂಬಂಧಿಕರು ಆಗ್ರಹಿಸಿದ್ದಾರೆ.

ಓದಿ:ಬೆಳಗಾವಿಯಲ್ಲಿ ಮಾಂಜಾ ದಾರದ ಮತ್ತೊಂದು ಅವಾಂತರ!

ABOUT THE AUTHOR

...view details