ಕರ್ನಾಟಕ

karnataka

ETV Bharat / state

ಚುನಾವಣೆ ಬಳಿಕ ರಿಲ್ಯಾಕ್ಸ್ ಮೂಡ್​ನಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ - Belgaum news

ಚುನಾವಣೆ ಘೋಷಣೆ ಆದಾಗಿನಿಂದಲೂ ಸದಾ ಚಟುವಡಿಕೆಯಿಂದಿದ್ದ ಮಂಗಳಾ ಅಂಗಡಿ ಹಾಗೂ ಇಬ್ಬರು ಪುತ್ರಿಯರು ಇವತ್ತು ರಿಲ್ಯಾಕ್ಸ್ ಮೂಡ್​​ನಲ್ಲಿದ್ದಾರೆ.

ಮಂಗಳಾ ಅಂಗಡಿ
ಮಂಗಳಾ ಅಂಗಡಿ

By

Published : Apr 18, 2021, 4:25 PM IST

Updated : Apr 18, 2021, 7:57 PM IST

ಬೆಳಗಾವಿ:ದಿ. ಸುರೇಶ್​​ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾದ ಬೆಳಗಾವಿ ಲೋಕಸಭೆ ಉಪಚುನಾವಣೆಗೆ ನಿನ್ನೆಯಷ್ಟೇ ಮತದಾನ ಪ್ರಕ್ರಿಯೆ ಮುಗಿದಿದ್ದು, ಚುನಾವಣೆ ದಿನಾಂಕ ಘೋಷಣೆ ಆದಾಗಿನಿಂದಲೂ ಬ್ಯೂಸಿ ಆಗಿದ್ದ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಸದ್ಯ ಮಕ್ಕಳೊಂದಿಗೆ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ.

ರಿಲ್ಯಾಕ್ಸ್ ಮೂಡ್​ನಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ

ಇಲ್ಲಿನ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿರುವ ನಿವಾಸದಲ್ಲಿರುವ ಬಿಜೆಪಿ ಅಭ್ಯರ್ಥಿ ಆಗಿ ಸ್ಪರ್ಧಿಸಿದ್ದ ದಿ. ಸುರೇಶ್​ ಅಂಗಡಿ ಧರ್ಮಪತ್ನಿ ಮಂಗಳಾ ಅಂಗಡಿ, ಪುತ್ರಿಯರಾದ ಡಾ.‌ ಸ್ಫೂರ್ತಿ, ಶ್ರದ್ಧಾ ಶೆಟ್ಟರ್ ಹಾಗೂ ಮೊಮ್ಮಗಳ ಜೊತೆಗೆ ಸಮಯ ಕಳೆಯುತ್ತಿದ್ದಾರೆ‌‌.

ಚುನಾವಣೆ ಘೋಷಣೆ ಆದಾಗಿನಿಂದಲೂ ಸದಾ ಚಟುವಡಿಕೆಯಿಂದಿದ್ದ ಮಂಗಳಾ ಅಂಗಡಿ ಹಾಗೂ ಇಬ್ಬರು ಪುತ್ರಿಯರು ಇವತ್ತು ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಕಾರಣದಿಂದಾಗಿ ಮತದಾನ ಕಡಿಮೆ ಪ್ರಮಾಣದಲ್ಲಿ ಆದರೂ ಹೆಚ್ಚಿನ ಜನರು ಬಿಜೆಪಿ ಪರವಾಗಿ ಮತದಾನ ಮಾಡಿದ್ದಾರೆ. ಸೋಲು-ಗೆಲುವು ಏನೇ ಇರಲಿ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಸಕ್ರಿಯವಾಗಿ ಮಾಡುತ್ತೇನೆ. ಉಪಚುನಾವಣೆಯಲ್ಲಿ ಸಹಕರಿಸಿದ ಕೇಂದ್ರ, ರಾಜ್ಯದ ನಾಯಕರು ಹಾಗೂ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಬಳಿಕ ಮಾತನಾಡಿದ ಸುರೇಶ್​​ ಅಂಗಡಿ ಅವರ ಹಿರಿಯ ಪುತ್ರಿ ಡಾ. ಸ್ಫೂರ್ತಿ ಪಾಟೀಲ್, ಅಂಗಡಿಯವರೇ ನಮಗೆ ಸ್ಫೂರ್ತಿ. ಅವರ ಪ್ರೇರಣೆಯಿಂದಲೇ ನಾವು ಬದುಕು ಎದುರಿಸುವುದನ್ನು ಕಲಿತಿದ್ದೇವೆ. ಚುನಾವಣೆಗೆ ಸಂಬಂಧಿಸಿದಂತೆ ನಾನು ಸಾಕಷ್ಟು ವಿದ್ಯಾ ಸಂಸ್ಥೆಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದ್ದೇನೆ. ಯುವಕರು ಗೆಲ್ಲಿಸುವ ಭರವಸೆ ಕೊಟ್ಟಿದ್ದರು. ಅದಕ್ಕೆ ಕಾರಣ ತಂದೆಯವರು ಎಲ್ಲ ರೀತಿಯಿಂದಲೂ ನಮಗೆ ಪ್ರೋತ್ಸಾಹ ನೀಡಿದ್ದಾರೆ. ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇವೆ. ಈ ಚುನಾವಣೆಯಲ್ಲಿ ಕಾರ್ಯಕರ್ತರು, ಜನ ಸಂಪರ್ಕ ಸೇರಿ ಯಾವುದರ ಬಗ್ಗೆಯೂ ಹೆಚ್ಚು ಗಂಭೀರವಾಗಿ ಯೋಚನೆ ಮಾಡದಿರುವ ನಮಗೆ ತಂದೆಯವರ ಅಕಾಲಿಕ ನಿಧನದಿಂದ ಎದುರಾದ ಉಪಚುನಾವಣೆ ನಮಗೆ ಹಲವಾರು ಪಾಠಗಳನ್ನು ಕಲಿಸಿಕೊಟ್ಟಿದೆ. ಚುನಾವಣೆ ಸಂದರ್ಭದಲ್ಲಿ ನಾಯಕರು ನಮ್ಮ ಪರವಾಗಿದ್ದರು. ಕಾರ್ಯಕರ್ತರು ನಮ್ಮ ಜೊತೆಗಿದ್ದರು. ಮತದಾರರು ನಮ್ಮ ಪರ ನಿಂತೇ ನಿಲ್ಲುತ್ತಾರೆ. ಹೀಗಾಗಿ ಸೋಲಿರಲಿ, ಗೆಲುವಿರಲಿ ಮುಂದೆಯೂ ನಾವು ಕ್ಷೇತ್ರದ ಜನರು ಜೊತೆಗೆ ಇರುತ್ತೇವೆ ಎಂದರು.

ಇದನ್ನೂ ಓದಿ:ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷೆಗಳು ನಾಳೆಯಿಂದ ಆರಂಭ

ಇನ್ನೋರ್ವ ಪುತ್ರಿ ಶ್ರದ್ಧಾ ಶೆಟ್ಟರ್ ಮಾತನಾಡಿ, ತಂದೆಯಿಂದ ಕಲಿತ ಪಾಠಗಳು, ರಾಜಕೀಯ ಮಾರ್ಗದರ್ಶನ, ನಾಯಕರ ಬೆಂಬಲ, ಕಾರ್ಯಕರ್ತರ ಶ್ರಮದಿಂದ ಉಪಚುನಾವಣೆ ಪ್ರಚಾರ ಸುಗಮವಾಗಿ ನಡೆದಿದೆ. ನಾವು ಕೂಡ ಮೊದಲ ಬಾರಿಗೆ ಸಕ್ರಿಯವಾಗಿ ಕೆಲಸ ಮಾಡಿದ್ದೇವೆ. ತಂದೆ ಅವರು ಹೆಣ್ಣುಮಕ್ಕಳು ಸ್ಟ್ರಾಂಗ್ ಇರಬೇಕು ಅಂತ ಹೇಳುತ್ತಿದ್ದರು. ನಾವು ಕೂಡ ಅದೇ ರೀತಿ ಅವರ ಮಾತಿನಂತೆ ನಡೆದುಕೊಂಡಿದ್ದೇವೆ. ಎಲ್ಲ ಕ್ಷೇತ್ರಗಳಲ್ಲೂ ಭೇಟಿ ನೀಡಿ ಪ್ರಚಾರ ನಡೆಸಿದ್ದೇವೆ‌. ಜನರಿಂದ ಕೂಡ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚು ಮತ ಪಡೆಯುತ್ತೇವೆ ಎಂದರು.

Last Updated : Apr 18, 2021, 7:57 PM IST

ABOUT THE AUTHOR

...view details