ಕರ್ನಾಟಕ

karnataka

ETV Bharat / state

ಪೊಲೀಸ್‌ ನೌಕರಿಯ ನೇಮಕಾತಿ ಪತ್ರಕ್ಕೆ ಕಾಯುತ್ತಿದ್ದ ಯುವಕ ನೇಣಿಗೆ ಶರಣು - ದುಂಡಪ್ಪಾ ಹಿಡಕಲ್ ಆತ್ಮಹತ್ಯೆ

ಅಥಣಿ ತಾಲೂಕಿನ ಸತ್ತಿ ಗ್ರಾಮದ ಬಸವರಾಜ ದುಂಡಪ್ಪ ಹಿಡಕಲ್ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

dundappa hidakal  committed suicide
ದುಂಡಪ್ಪಾ ಹಿಡಕಲ್ ಆತ್ಮಹತ್ಯೆ

By

Published : Jun 30, 2021, 12:39 PM IST

Updated : Jun 30, 2021, 6:08 PM IST

ಅಥಣಿ: ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ ಆಯ್ಕೆಯಾದ ಸತ್ತಿ ಗ್ರಾಮದ ಯುವಕ ನೇಣಿಗೆ ಶರಣಾಗಿದ್ದಾನೆ. ಅಥಣಿ ತಾಲೂಕಿನ ಸತ್ತಿ ಗ್ರಾಮದ ಬಸವರಾಜ ದುಂಡಪ್ಪ ಹಿಡಕಲ್ (24) ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.

ನೇಣಿಗೆ ಶರಣಾದ ಬಸವರಾಜ ದುಂಡಪ್ಪ ಹಿಡಕಲ್

ಪೊಲೀಸ್ ನೌಕರಿಗೆ ಆಯ್ಕೆಯಾಗಿರುವ ಯುವಕ ಮುಂದಿನ ತಿಂಗಳು ಬರಲಿರುವ ನೇಮಕಾತಿ ಪತ್ರಕ್ಕೆ ಕಾಯುತ್ತಿದ್ದ. ಅಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಮಂಡ್ಯ: ವಿದ್ಯುತ್ ತಂತಿ ತಗುಲಿ ಹೊತ್ತಿ ಉರಿದ ಲಾರಿ

Last Updated : Jun 30, 2021, 6:08 PM IST

ABOUT THE AUTHOR

...view details