ಬೆಳಗಾವಿ:ಕೊರೊನಾ ನಿಯಂತ್ರಣಕ್ಕಾಗಿ ಕರದಂಟು ನಗರಿ ಗೋಕಾಕಿನಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಈ ಮಧ್ಯೆ ಗೋಕಾಕ್ ಪೊಲೀಸರು ಲಾಕ್‌ಡೌನ್ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ವಸೂಲಿಗಿಳಿದರಾ? ಎಂಬ ಅನುಮಾನ ಮೂಡತೊಡಗಿವೆ.
ಮಾಸ್ಕ್ ಬದಲು ಮುಖಕ್ಕೆ ಕರವಸ್ತ್ರ: ಬೈಕ್ ಸವಾರನಿಂದ ಹಣ ಪೀಕಿದ ಪೊಲೀಸ್
ಕೊರೊನಾ ನಿಯಂತ್ರಣಕ್ಕಾಗಿ ಬೆಳಗಾವಿಯ ಗೋಕಾಕಿನಲ್ಲಿ ಲಾಕ್‌ಡೌನ್ ವಿಧಿಸಲಾಗಿದ್ದು, ಈ ವೇಳೆ ಬೈಕ್ನಲ್ಲಿ ಯುವಕನೋರ್ವ ಮುಖಕ್ಕೆ ಮಾಸ್ಕ್ ಬದಲು ಕರವಸ್ತ್ರ ಕಟ್ಟಿಕೊಂಡು ಬಂದಿದ್ದಕ್ಕೆ ಪೊಲೀಸ್ ಸಿಬ್ಬಂದಿ ಆತನಿಗೆ ಬೆದರಿಕೆ ಹಾಕಿದ್ದು, ಹಣ ವಸೂಲಿ ಮಾಡಿ ಜೇಬಿಗಿಳಿಸಿದ್ದಾರೆ.
ಮಾಸ್ಕ್ ಬದಲು ಕರವಸ್ತ್ರ ಕಟ್ಟಿಕೊಂಡಿದ್ದಕ್ಕೆ ತಡೆದ ಪೊಲೀಸ್
ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಬೈಕ್ನಲ್ಲಿ ಬಂದ ಯುವಕನಿಂದ ಪೊಲೀಸ್ ಕಾನ್ಸ್‌ಟೇಬಲ್ ಹಣವಸೂಲಿ ಮಾಡುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಗೋಕಾಕಿನ ಬಸವೇಶ್ವರ ವೃತ್ತದಲ್ಲಿ ಲಾಕ್‌ಡೌನ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಕಾನ್ಸ್ ಟೇಬಲ್, ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಬೈಕ್ ಮೇಲೆ ಬಂದ ಯುವಕನನ್ನು ತಡೆದು, ಮಾಸ್ಕ್ ಏಕೆ ಹಾಕಿಲ್ಲ ಎಂದು ತರಾಟೆಗೆ ತೆಗೆದುಕೊಂಡು ಲಾಠಿ ಬೀಸಿದ್ದಾರೆ.