ಕರ್ನಾಟಕ

karnataka

ETV Bharat / state

ಕೌಟುಂಬಿಕ ಕಲಹ: ಪತ್ನಿ ಕೊಂದು ಪೊಲೀಸರಿಗೆ ಶರಣಾದ ಪತಿ - Belagavi

ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯನ್ನು ಪತಿಯೇ ಕೊಲೆ ಮಾಡಿ ಪೊಲೀಸ್ ಠಾಣೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನಲ್ಲಿ ನಡೆದಿದೆ.

Belagavi
ಹಣಮಂತ ಸಿದ್ದಪ್ಪ ಹಿಡಕಲ್-ಕೊಲೆ ಆರೋಪಿ

By

Published : Jun 3, 2023, 11:55 AM IST

ಬೆಳಗಾವಿ:ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ಆರೋಪಿ ಪತಿ ಪೊಲೀಸರಿಗೆ ಶರಣಾಗಿದ್ದಾನೆ. ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಬಸವ್ವ ಹಣಮಂತ ಹಿಡಕಲ್(30) ಕೊಲೆಯಾದ ದುರ್ದೈವಿ. ಹಣಮಂತ ಸಿದ್ದಪ್ಪ ಹಿಡಕಲ್( 35) ಕೊಲೆ ಆರೋಪಿ.

ಪ್ರಕರಣದ ವಿವರ: ಪತಿ ಹಣಮಂತ ಯಾವುದೇ ಕೆಲಸ ಮಾಡದೇ ಓಡಾಡಿಕೊಂಡಿದ್ದನಂತೆ. ಪತ್ನಿ ಬಸವ್ವ ಕೂಲಿ ಕೆಲಸ ಮಾಡಿ ಸಂಸಾರದ ಬಂಡಿ ಸಾಗಿಸುತ್ತಿದ್ದರು. ಪತಿ ಹಣಮಂತನಿಗೆ ನೀನು ಕೆಲಸ ಮಾಡುತ್ತಿಲ್ಲ ಎಂದು ಆಗಾಗ ಬಸವ್ವ ತಗಾದೆ ತೆಗೆಯುತ್ತಿದ್ದರಂತೆ. ಇದರಿಂದ ದಂಪತಿಯ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಹೀಗೆ ಶುಕ್ರವಾರ ನಡೆದ ಜಗಳ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಈ ದಂಪತಿಗೆ 10 ವರ್ಷದ ಒಬ್ಬ ಮಗನಿದ್ದಾನೆ. ಪ್ರಕರಣದಲ್ಲಿ ತಾಯಿ ಮೃತಪಟ್ಟು ತಂದೆ ಜೈಲು ಪಾಲಾಗಿದ್ದಾರೆ. ಇದರಿಂದ 10 ವರ್ಷದ ಬಾಲಕ ಅನಾಥನಾಗಿದ್ದಾನೆ. ಮೂಡಲಗಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ವ್ಯಕ್ತಿಯ ಬರ್ಬರ ಹತ್ಯೆ: ಹಸೆಮಣೆ ಏರಬೇಕಿದ್ದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ನಿಂಗಪ್ಪ ಬೂದಪ್ಪ ನವಲೂರ (28) ಕೊಲೆೆಯಾದ ವ್ಯಕ್ತಿ. ದುಷ್ಕರ್ಮಿಗಳು ತೋಟದ ಮನೆಯಲ್ಲಿ ಕಣ್ಣಿಗೆ ಕಾರದ ಪುಡಿ ಎರಚಿ ಬಳಿಕ ಕತ್ತು ಹಿಸುಕಿ ಕೊಂದಿದ್ದಾರೆ ಎನ್ನಲಾಗಿತ್ತು. ತಾವರಗೇರೆ ಗ್ರಾಮದ ಯುವತಿ ಜತೆ ಮದುವೆ ನಿಶ್ಚಯವಾಗಿತ್ತು. ಜೂನ್ 7 ರಂದು ಮದುವೆ ನಡೆಯಬೇಕಿತ್ತು. ಗುರುವಾರ(ಮೇ 1) ಮಧ್ಯರಾತ್ರಿ ಕೊಲೆ ನಡೆದಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಕಲಘಟಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಮದುವೆಗೆ ನಾಲ್ಕೇ ದಿನ ಬಾಕಿ ಇತ್ತು: ಹುಬ್ಬಳ್ಳಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

ಯುವಕನ ಬರ್ಬರ ಕೊಲೆ:ಅನೈತಿಕ ಸಂಬಂಧದ ವಿಚಾರಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಿಂಗ್ರಹಳ್ಳಿ ಗ್ರಾಮದಲ್ಲಿ‌ ಇತ್ತೀಚೆಗೆ ನಡೆದಿತ್ತು. ಗ್ರಾಮದ ಪ್ರದೀಪ್ (27) ಕೊಲೆಗೀಡಾಗಿರುವ ಯುವಕ. ಈತ ಇದೇ ಊರಿನ ವೆಂಕಟೇಶ್ ಎಂಬಾತನ ಪತ್ನಿ ಜತೆ ಈ ಪ್ರದೀಪ್​ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂಬ ಆರೋಪ ಕೇಳಿ‌ ಬಂದಿತ್ತು.

ಮದ್ಯಪಾನ ಮಾಡಿಸಿ ಸಂಚು ರೂಪಿಸಿದರು.. ಇದೇ ವಿಚಾರವಾಗಿ‌ ನಿನ್ನ ಬಳಿ‌ ಮಾತನಾಡಬೇಕು ಬಾ ಎಂದು ಆ ಮಹಿಳೆಯ ಪತಿ ವೆಂಕಟೇಶನು ಪ್ರದೀಪನನ್ನು ಕರೆಸಿಕೊಂಡಿದ್ದನಂತೆ. ಗ್ರಾಮದ ಹೊರವಲಯದ ಲೇಔಟ್ ಒಂದರಲ್ಲಿ ವೆಂಕಟೇಶ ಹಾಗೂ ನಾಗೇಶ ಎಂಬುವವರು ಪ್ರದೀಪನಿಗೆ ಚೆನ್ನಾಗಿ ಮದ್ಯಪಾನ ಮಾಡಿಸಿ ಕೈ ಕಾಲುಗಳನ್ನು ಕಟ್ಟಿ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿತ್ತು.

ಇದನ್ನೂ ಓದಿ:ಅನೈತಿಕ ಸಂಬಂಧದ ವಿಚಾರಕ್ಕೆ ಯುವಕನ ಬರ್ಬರ ಕೊಲೆ.. ಮನೆಗೆ ಆಧಾರವಾಗಿದ್ದ ವ್ಯಕ್ತಿ ನಡುಬೀದಿಯಲ್ಲಿ ಹೆಣವಾದ

ABOUT THE AUTHOR

...view details