ಕರ್ನಾಟಕ

karnataka

ETV Bharat / state

ಜಮೀನಿನಲ್ಲಿ ಎಮ್ಮೆ-ಕುರಿ ಬಿಡಬೇಡಿ ಎಂದಿದಕ್ಕೆ ವ್ಯಕ್ತಿಯ ಬರ್ಬರ ಕೊಲೆ - undefined

ಜಮೀನಿನಲ್ಲಿ ಎಮ್ಮೆಗಳನ್ನು ಮೇಯಿಸುತ್ತಿದ್ದರೆಂದು ಎಚ್ಚರಿಕೆ ಕೊಟ್ಟಿದ್ದಕ್ಕೆ ವ್ಯಕ್ತಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.

ಕೊಲೆ

By

Published : Jun 28, 2019, 12:14 PM IST

ಬೆಳಗಾವಿ: ತಮ್ಮ ಜಮೀನಿನಲ್ಲಿ ಎಮ್ಮೆ, ಮೇಕೆ ಮೇಯಿಸದಂತೆ ಎಚ್ಚರಿಕೆ‌ ಕೊಟ್ಟ ವ್ಯಕ್ತಿಯನ್ನೇ ‌ನಾಲ್ಕು ಜನರ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ತಾಲೂಕಿನ ಮುತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ‌.

ಸಿದ್ರಾಯಿ ಕಣ್ಣಪ್ಪಾ ನಾಯಕ್​ (30) ಕೊಲೆಯಾಗಿರುವ ವ್ಯಕ್ತಿ. ಸಿದ್ರಾಯಿ ನಾಯಕ್​ ಮುತ್ಯಾನಟ್ಟಿಯಲ್ಲಿರುವ ತಮ್ಮ ಜಮೀನಲ್ಲಿ ಮಾವಿನ ತೋಟ ಮಾಡಿದ್ದರು. ಸಿದ್ರಾಯಿ ಇಲ್ಲದಾಗ ಆರೋಪಿಯ ಕುಟುಂಬ ಸದಸ್ಯರು ಕುರಿ ಮತ್ತು ಎಮ್ಮೆಗಳನ್ನು ಮೇಯಿಸುತ್ತಿದ್ದರು. ಈ ಸಂಬಂಧ ‌ಸಿದ್ರಾಯಿ ಎಮ್ಮೆ, ಕುರಿಗಳನ್ನು ತಮ್ಮ ಜಮೀನಿನಲ್ಲಿ ಮೇಯಿಸದಂತೆ ಎಚ್ಚರಿಕೆ ನೀಡಿದ್ದ ಎನ್ನಲಾಗ್ತಿದೆ.

ಆದರೆ ಇದಕ್ಕೆ ಕ್ಯಾರೆ ಎನ್ನದ ಆರೋಪಿ ಕುಟುಂಬದವರು ತಮ್ಮ ಚಾಳಿ ಮುಂದುವರೆಸಿದ್ದರು. ಎರಡು ಕುಟುಂಬಗಳ ಮಧ್ಯೆ ಈ ಸಂಬಂಧ ವಾದ ವಿವಾದಗಳು ನಡೆಯುತ್ತಲೇ ಇದ್ದವು. ನಿನ್ನೆ‌ ರಾತ್ರಿ ಚವ್ಹಾಟ್ ಗಲ್ಲಿಯಲ್ಲಿ ನಿಂತಿದ್ದ ಸಿದ್ರಾಯಿಯನ್ನು ಮಾರಕಾಸ್ತ್ರಗಳಿಂದ ಕೊಲೆಗೈದು ಪರಾರಿಯಾಗಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಕಾಕತಿ‌ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕಾಕತಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details