ಬೆಳಗಾವಿ:ಮಲಪ್ರಭೆಯ ನೀರಿನ ರಭಸಕ್ಕೆ ವ್ಯಕ್ತಿ ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿಲ್ಲಾ ತೋರಗಲ್ಲ ಗ್ರಾಮದ ಬಳಿ ಜರುಗಿದೆ.
ಮತ್ತೆ ಮುನಿದ ಮಲಪ್ರಭೆ : ಕೊಚ್ಚಿ ಹೋದ ವ್ಯಕ್ತಿ, ಪೊಲೀಸರಿಂದ ಶೋಧಕಾರ್ಯ - ಮಲಪ್ರಭೆ
ಪಶ್ಚಿಮಘಟ್ಟದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮತ್ತೆ ತುಂಬಿ ಹರಿಯುತ್ತಿರುವ ಮಲಪ್ರಭಾ ನದಿಯ ನೀರಿನ ಸೆಳೆತಕ್ಕೆ ರಾಮದುರ್ಗ ತಾಲೂಕಿನ ಕಿಲ್ಲಾ ತೋರಗಲ್ಲ ಗ್ರಾಮದ ಓರ್ವ ವ್ಯಕ್ತಿ ಕೊಚ್ಚಿಕೊಂಡು ಹೋಗಿದ್ದಾರೆ.
ಕೊಚ್ಚಿ ಹೋದ ವ್ಯಕ್ತಿ
ಪಶ್ಚಿಮ ಘಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಮತ್ತೆ ತುಂಬಿ ಹರಿಯುತ್ತಿರುವ ಮಲಪ್ರಭಾ ನದಿಯ ನೀರಿನ ಸೆಳೆತಕ್ಕೆ ಮದರಸಾಬ್ ಮಕಾಂದಾರ (50) ಎಂಬುವವರು ಕೊಚ್ಚಿಕೊಂಡು ಹೋಗಿದ್ದಾರೆ. ಕಿಲ್ಲಾ ತೋರಗಲ್ಲ ಗ್ರಾಮದ ಬಳಿ ಹಾಯ್ದು ಹೋಗಿರುವ ಮಲಪ್ರಭಾ ನದಿ ದಾಟುವಾಗ ಈ ದುರ್ಘಟನೆ ಸಂಭವಿಸಿದೆ.
ರಾತ್ರಿಯಿಂದಲೇ ಕೊಚ್ಚಿಹೋದ ವ್ಯಕ್ತಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.