ಕರ್ನಾಟಕ

karnataka

ETV Bharat / state

ಬೆಳಗಾವಿ: ಆಸ್ತಿಗಾಗಿ ತಮ್ಮನ ಮಗನನ್ನೇ ಹತ್ಯೆ ಮಾಡಿದ ಪಾಪಿ ದೊಡ್ಡಪ್ಪ! - ಆಸ್ತಿಗಾಗಿ ಹತ್ಯೆ

ಅಜ್ಜನ ಕಾಲದಿಂದಲೂ 20 ಎಕರೆ ಜಮೀನು ಹಂಚಿಕೆಯಾಗಿರಲಿಲ್ಲ. ನಾಲ್ಕು ಜನ ಸಹೋದರರಿದ್ದು, ತಲಾ ಒಬ್ಬರಿಗೆ 5 ಎಕರೆ ಜಮೀನು ನೀಡಲಾಗಿತ್ತು. ಅಧಿಕೃತವಾಗಿ ದಾಖಲೆ ಸರಿಯಾಗಿ ಆಸ್ತಿ ಪಾಲು ಆಗಿರಲಿಲ್ಲ‌. ಅದನ್ನು ಪಾಲು ಮಾಡಿ ಕೊಡಿ ಎಂದು ಆರೋಪಿ ಈರಪ್ಪ ಸಂಕಣ್ಣವರ್ ಆಗಾಗ ಮೃತ ಬಾಲಕನ ತಂದೆ ವಿರೇಶ್ ಜತೆಗೆ ಕಾಲ್ಕೆರೆದು ಜಗಳ ತೆಗೆಯುತ್ತಿದ್ದ ಎನ್ನಲಾಗ್ತಿದೆ. ಈ ಸಂಬಂಧ ತಮ್ಮನ ಮಗನನ್ನೇ ಈರಪ್ಪ ಕೊಲೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

Man killed a boy for property issue in Belagavi
ಆಸ್ತಿಗಾಗಿ ತಮ್ಮನ ಮಗನನ್ನೇ ಹತ್ಯೆ ಮಾಡಿದ ಪಾಪಿ ದೊಡ್ಡಪ್ಪ

By

Published : Jan 20, 2021, 5:46 PM IST

ಬೆಳಗಾವಿ:ಆಸ್ತಿಗಾಗಿ ಒಡಹುಟ್ಟಿದ ತಮ್ಮನ ಮಗನನ್ನೇ ಕೊಲೆ ಮಾಡಿರುವ ಘಟನೆ ಸವದತ್ತಿ ತಾಲೂಕಿನ ಹಾರೋಗೊಪ್ಪ ಗ್ರಾಮದಲ್ಲಿ ನಡೆದಿದೆ. ಈರಪ್ಪಾ ಸಂಕಣ್ಣವರ್ ಎಂಬ ಆರೋಪಿ ಮಗನ ಸಮಾನವಾದ ಮಾರುತಿ ಸಂಕಣ್ಣವರ್​ನನ್ನು ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ತನ್ನ ಮನೆಯ ಮುಂದೆ ಆಟವಾಡುತ್ತಿದ್ದ ತಮ್ಮನ ಮಗನನ್ನು ಕರುಣೆಯಿಲ್ಲದೆ ಕುಡಗೋಲಿನಿಂದ ಕೊಚ್ಚಿ ಹಲ್ಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ವೇಳೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕುಟುಂಬಸ್ಥರು ಓಡಿ ಬಂದು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದಾಗುವ ಮುನ್ನವೇ ಕಂದಮ್ಮನ ಉಸಿರು ನಿಂತುಹೋಗಿದೆ.

ಆಸ್ತಿಗಾಗಿ ತಮ್ಮನ ಮಗನನ್ನೇ ಹತ್ಯೆ ಮಾಡಿದ ಪಾಪಿ ದೊಡ್ಡಪ್ಪ

ಕೊಲೆಗೆ ಕಾರಣವಾಗಿತ್ತು ಆಸ್ತಿ ವಿವಾದ

ಆರೋಪಿ ಈರಪ್ಪ ಮತ್ತು ಬಾಲಕನ ತಂದೆ ವೀರೇಶ ಸಂಕಣ್ಣವರ್ ಒಂದೇ ಕುಟುಂಬದವರು. ಸಂಬಂಧದಲ್ಲಿ ಆರೋಪಿ ಮತ್ತು ಮಗನ ಕಳೆದುಕೊಂಡ ವೀರೇಶ್​ ಇಬ್ಬರು ಸಹೋದರರರಾಗಬೇಕು. ಅಜ್ಜನ ಕಾಲದಿಂದಲೂ 20 ಎಕರೆ ಜಮೀನು ಹಂಚಿಕೆಯಾಗಿರಲಿಲ್ಲ. ನಾಲ್ಕು ಜನ ಸಹೋದರರಿದ್ದು, ತಲಾ ಒಬ್ಬರಿಗೆ 5 ಎಕರೆ ಜಮೀನು ನೀಡಲಾಗಿತ್ತು. ಅಧಿಕೃತವಾಗಿ ಆಸ್ತಿ ಪಾಲು ಆಗಿರಲಿಲ್ಲ‌. ಅದನ್ನು ಪಾಲು ಮಾಡಿ ಕೊಡಿ ಎಂದು ಆರೋಪಿ ಈರಪ್ಪ ಸಂಕಣ್ಣವರ್ ಆಗಾಗ್ಗೆ ಮೃತ ಬಾಲಕನ ತಂದೆ ವೀರೇಶ್ ಜತೆಗೆ ಕಾಲ್ಕೆರೆದು ಜಗಳ ತೆಗೆಯುತ್ತಿದ್ದ ಎನ್ನಲಾಗ್ತಿದೆ.

ಇದರಿಂದ ವೀರೇಶ್ ಕುಟುಂಬದ ಮೇಲೆ ಈರಪ್ಪ ಸೇಡು ತೀರಿಸಿಕೊಳ್ಳಲು ಕಾದಿದ್ದ, ಬಹುದಿನದಿಂದ ಸೂಕ್ತ ಸಮಯಕ್ಕಾಗಿ ಕಾದಿದ್ದ ಆರೋಪಿ, ಇಂದು ಬೆಳಗ್ಗೆ ಬಾಲಕನ ಕುಟುಂಬಸ್ಥರು ಜಮೀನಿಗೆ ತೆರಳುವುದನ್ನು ಗಮನಿಸಿದ್ದಾನೆ. ಅಲ್ಲದೆ ಬಾಲಕನು ತನ್ನ ತಂಗಿಯ ಜೊತೆ ಆಟವಾಡುತ್ತಿರುವುದನ್ನು ಕಂಡು ಕೊಲೆ ಮಾಡುವ ನಿರ್ಧಾರ ಮಾಡಿದ್ದಾನೆ. ಕುಡುಗೋಲಿನಿಂದ ಕುತ್ತಿಗೆಗೆ ಹಲ್ಲೆ ಮಾಡಿದ್ದಾನೆ.

ಈ ವೇಳೆ ನೆಲಕ್ಕುರುಳಿದ ಬಾಲಕ ಅಲ್ಲೇ ಸಾವನ್ನಪ್ಪಿದ್ದಾನೆ. ಬಾಲಕ ಸಾವನ್ನಪ್ಪುತ್ತಿದ್ದಂತೆ ಆರೋಪಿ ಈರಣ್ಣ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಪ್ರಕರಣ ಸಂಬಂಧ ಮುರಗೋಡ ಪೊಲೀಸರು ಆರೋಪಿಯ ಹುಡುಕಾಟದಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ:ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಅಥಣಿಯಲ್ಲಿ ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ

ABOUT THE AUTHOR

...view details