ಕರ್ನಾಟಕ

karnataka

ETV Bharat / state

ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಆರೋಪಿ ನಿಪ್ಪಾಣಿಯಲ್ಲಿ ಅರೆಸ್ಟ್​ ​ - ಅಕ್ರಮ ಮದ್ಯ ಸಾಗಾಟ ವ್ಯಕ್ತಿ ಬಂಧನ

ಅಬಕಾರಿ ಇಲಾಖೆಯ ಚಿಕ್ಕೋಡಿ ಉಪವಿಭಾಗದ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 50 ಸಾವಿರ ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡು ವ್ಯಕ್ತಿಯನ್ನು ಬಂಧಿಸಿದ ಘಟನೆ ನಿಪ್ಪಾಣಿ ನಗರದಲ್ಲಿ ನಡೆದಿದೆ.

ವ್ಯಕ್ತಿಯ ಬಂಧನ
ವ್ಯಕ್ತಿಯ ಬಂಧನ

By

Published : Dec 24, 2019, 8:22 AM IST

ಚಿಕ್ಕೋಡಿ: ಅಬಕಾರಿ ಇಲಾಖೆಯ ಚಿಕ್ಕೋಡಿ ಉಪವಿಭಾಗದ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 50 ಸಾವಿರ ರೂಪಾಯಿ ಮೌಲ್ಯದ ಮದ್ಯ ವಶಪಡಿಸಿಕೊಂಡು ವ್ಯಕ್ತಿಯನ್ನು ಬಂಧಿಸಿರುವ ಪ್ರಕರಣ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ನಡೆದಿದೆ.

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಚಂದಗಡ್​ನ ಲಕ್ಷ್ಮಣ್​ ಬಾಳು ಚವ್ಹಾಣ್​ ಬಂಧಿತ. ಈತ ಗೋವಾದಿಂದ ಕೊಲ್ಲಾಪುರಕ್ಕೆ ಕಾರಿನಲ್ಲಿ ಮದ್ಯ ಸಾಗಿಸುವಾಗ ನಗರ ಹೊರವಲಯದಲ್ಲಿರುವ ಅಮರ್ ಹೋಟೆಲ್ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಬಕಾರಿ ಇಲಾಖೆ ಪೊಲೀಸರು ದಾಳಿ ನಡೆಸಿದ್ದಾರೆ.

ಸುಮಾರು 53 ಲೀಟರ್​ಗಳ 6 ಬಾಕ್ಸ್​ಗಳು ಮತ್ತು12 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಅಬಕಾರಿ ಡಿಎಸ್‍ಪಿ ವಿಜಯಕುಮಾರ ಹಿರೇಮಠ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಇನ್ಸ್​ಪೆಕ್ಟರ್ ಬಸವರಾಜ ಕರಮಣ್ಣವರ, ಸಬ್‍ ಇನ್ಸ್​ಪೆಕ್ಟರ್ ಸುರೇಂದ್ರ ಅರಗಲ್, ಶಾಂತಾರಾಮ ಹೆಗಡೆ, ಸಿಬ್ಬಂದಿ ಹಸನಸಾಬ ನದಾಫ್, ರಾಜು ಅಂಬಾರಿ, ಸಯ್ಯದ್ ಫಯಾಜ್ ಪಾಲ್ಗೊಂಡಿದ್ದರು.

ABOUT THE AUTHOR

...view details