ಬೆಳಗಾವಿ:ಬಿಜೆಪಿಯವರಿಗೆ ರಾಹುಲ್ ಗಾಂಧಿಗೆ ಸಿಂಹಸ್ವಪ್ನವಾಗಿದ್ದಾರೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸ್ಟ್ಯಾಂಡ್ ಇಲ್ಲ ಎಂಬ ಪ್ರಲ್ಹಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ನರೇಂದ್ರ ಮೋದಿಯೂ ಎಲ್ಲರ ಕೈ ಹಿಡಿದಿದ್ದಾರೆ. ತಮಿಳುನಾಡಿನಲ್ಲಿ ಎಐಎಡಿಂಕೆ ಕೈ ಹಿಡಿದಿಲ್ವ? ಎಂದು ಪ್ರಶ್ನಿಸಿದರು. ಅಲೈಯನ್ಸ್ ಮಾಡೋದು ತಪ್ಪಲ್ಲ. ಸಂವಿಧಾನ ರಕ್ಷಣೆ, ಏಳಿಗೆಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರಕ್ಕೆ ರಾಹುಲ್ ಗಾಂಧಿ ಬಂದಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ, ಅವರು ಬರಲಿಲ್ಲ ಅಂದ್ರೆ ಬಂದಿಲ್ಲ ಅಂತೀರಿ, ಬಂದ್ರೆ ಬಂದಿದ್ದೀರಿ ಅಂತೀರಿ. ಇದನ್ನು ನೋಡಿದ್ರೆ ರಾಹುಲ್ ಗಾಂಧಿ ನಿಮ್ಮ ಕನಸಲ್ಲೂ ಬರ್ತಾರೆ ಅಂತಾ ಅರ್ಥ ಅಲ್ವೇ? ಎಂದು ಕೇಳಿದರು.
ಇನ್ನು ದೇಶದ ಸೈನಿಕರ ಬಗ್ಗೆ ನಮಗೆಲ್ಲ ಗೌರವವಿದೆ. ಗಡಿಭಾಗದಲ್ಲಿ ಹೋರಾಡುವವರು ದೇಶದ ಪ್ರತಿಯೊಂದು ಭಾಗದವರು ಬರ್ತಾರೆ. ದೇಶದ ಐಕ್ಯತೆಗಾಗಿ ಎಲ್ಲರೂ ಒಗ್ಗೂಡಿಸಿದ್ದೇವೆ ಎಂದರು.