ಕರ್ನಾಟಕ

karnataka

ETV Bharat / state

ಅಥಣಿಯಿಂದ ಟಿಕೆಟ್​ ಪಡೆದ ಮಹೇಶ್ ಕುಮಟಳ್ಳಿ.. ಪಕ್ಷದ ನಾಯಕರಿಗೆ ಧನ್ಯವಾದ ಅರ್ಪಿಸಿದ ಜಾರಕಿಹೊಳಿ ಆಪ್ತ

ಅಥಣಿ ವಿಧಾನಸಭಾ ಕ್ಷೇತ್ರದಿಂದ ರಮೇಶ್​ ಜಾರಕಿಹೊಳಿ ಆಪ್ತ ಮತ್ತು ಶಾಸಕ ಮಹೇಶ್​​ ಕುಮಟಳ್ಳಿಗೆ ಹೈಕಮಾಂಡ್​ ಟಿಕೆಟ್​ ಘೋಷಣೆ ಮಾಡಿದೆ. ಇದಕ್ಕೆ ಶಾಸಕ ಮಹೇಶ್​ ಪಕ್ಷದ ಮುಖಂಡರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಮಹೇಶ್ ಕುಮಟಳ್ಳಿ
ಮಹೇಶ್ ಕುಮಟಳ್ಳಿ

By

Published : Apr 12, 2023, 7:32 AM IST

Updated : Apr 12, 2023, 9:25 AM IST

ಚಿಕ್ಕೋಡಿ (ಬೆಳಗಾವಿ): ಅಥಣಿ ಬಿಜೆಪಿ ಟಿಕೆಟ್ ಗೊಂದಲಕ್ಕೆ ತೆರೆ ಬಿದ್ದಿದೆ. ಶಾಸಕ ಮಹೇಶ್ ಕುಮಟಳ್ಳಿ ಮತ್ತೊಮ್ಮೆ ಟಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಿದ್ದು, ವರಿಷ್ಠರಿಗೆ ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ದನ್ಯವಾದ ತಿಳಿಸಿದ್ದಾರೆ. ಅವರು ಅಥಣಿ ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತ, ಮತ್ತೊಮ್ಮೆ ಅವಕಾಶ ನೀಡಿದ್ದಕ್ಕೆ ಪಕ್ಷದ ನಾಯಕರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ನಾನು ರಮೇಶ್​ ಜಾರಕಿಹೊಳಿಯವರ ಜೊತೆ 2019ರಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ನಮಗೆ ಅನ್ಯಾಯ ಆಗಬಾರದು ಎಂದು ಗೋಕಾಕ್​ ಶಾಸಕರು ಬಿಜೆಪಿ ವರಿಷ್ಠರಿಗೆ ಮನವರಿಕೆ ಮಾಡಿದ್ದರು. ನಾನು ಕೂಡ ವರಿಷ್ಠರಿಗೆ ಮನವಿ ಮಾಡಿದ್ದೆ. ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಹಾಗೂ ಜನರು ಈ ಬಾರಿಯೂ ನನ್ನ ಆಯ್ಕೆ ಮಾಡುವಂತೆ ಜನರಲ್ಲಿ ಮನವಿ ಸಲ್ಲಿಸಿದರು.

ಲಕ್ಷ್ಮಣ್​ ಸವದಿ ಕಣ್ಣೀರು ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಬಿಜೆಪಿ ಪಕ್ಷವನ್ನು ಕಟ್ಟಿದ್ದಾರೆ. ಅವರು ಹಿರಿಯರಿದ್ದಾರೆ, ನಮಗಿಂತಲೂ ದೊಡ್ಡವರಿದ್ದಾರೆ. ನಾನು ಕೂಡಾ ಅವರನ್ನು ಭೇಟಿ ಆಗುತ್ತೇನೆ. ಮತ್ತೊಮ್ಮೆ ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ, ಅವರ ನೇತೃತ್ವದಲ್ಲೇ ಚುನಾವಣೆಯನ್ನು ಎದಿರುಸುತ್ತೇವೆ. ಸವದಿ ಅವರು ಈ ಹಿಂದೆಯೂ ಹೇಳಿದ್ದರು. ಈ ಕ್ಷೇತ್ರದಿಂದ ನಾನು ಅಥವಾ ಮಹೇಶ್​ ಇಬ್ಬರಲ್ಲಿ ಒಬ್ಬರು ಮಾತ್ರ ಸ್ಪರ್ಧೆ ಮಾಡುತ್ತೇವೆ ಎಂದಿದ್ದರು. ಅವರು ಕೂಡಾ 2023ರಲ್ಲಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ. ಅವರ ನೇತೃತ್ವದಲ್ಲಿ ಈ ಚುನಾವಣೆ ಎದುರಿಸಲಾಗುತ್ತದೆ ಎಂದು ಶಾಸಕ ಮಹೇಶ್​ ಕುಮಟಳ್ಳಿ ಹೇಳಿದರು.

ಇದನ್ನೂ ಓದಿ:ಅಥಣಿ ಟಿಕೆಟ್ ಫೈಟ್: ಸಿಎಂ ಬೊಮ್ಮಾಯಿ ಹೇಳಿಕೆಗೆ ಲಕ್ಷ್ಮಣ್ ಸವದಿ ಕಣ್ಣೀರು

ವೇದಿಕೆ ಮೇಲೆ ಕಣ್ಣೀರಿಟ್ಟ ಸವದಿ:ಲಕ್ಷ್ಮಣ್​ ಸವದಿಗೆ ಈ ಬಾರಿಯ ಚುನಾವಣೆಗೆ ಟಿಕೆಟ್ ನೀಡಲ್ಲ ಎಂದು ದೆಹಲಿಯಲ್ಲಿ ಸಿಎಂ ಪರೋಕ್ಷವಾಗಿ ಹೇಳಿದ್ದಕ್ಕೆ ಅಥಣಿಯ ಕಾರ್ಯಕ್ರಮದಲ್ಲಿ ಲಕ್ಷ್ಮಣ್​ ಸವದಿ ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ನನಗೆ ಟಿಕೆಟ್ ಇಲ್ಲ ಎಂದು ಸಿಎಂ ಹೇಳಿದ್ದಾರೆ. ನಾನು 2004ರಂದು ಭಾರತೀಯ ಜನತಾ ಪಾರ್ಟಿ ಸೇರಿದ್ದೆ. ಅಂದಿನಿಂದಲೂ ಈವರೆಗೆ ಪಕ್ಷ ಸಂಘಟನೆ ಮಾಡುತ್ತ ಬಂದಿದ್ದೇನೆ. ಇಂದು ಪಕ್ಷದ ವರಿಷ್ಠರಿಗೆ ಕೈಮುಗಿದು ಮನವಿ ಮಾಡಿಕೊಳ್ಳುತ್ತೇನೆ. ಬಿಜೆಪಿಯಿಂದ ನನ್ನನ್ನು ಹೊರ ಹಾಕಬೇಡಿ. ನಿಷ್ಠಾವಂತ ಕಾರ್ಯಕರ್ತ ನಾನು, ಅನ್ಯಾಯ ಮಾಡಬೇಡಿ. ಈ ಹಿಂದೆ ಬಿಎಸ್​ವೈ, ಈಶ್ವರಪ್ಪ ಅವರು ಮುಂದಿನ ಟಿಕೆಟ್​ ನಿನಗೇ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಬಿಎಸ್​ವೈ ನನ್ನ ಕರೆದು ನಿನಗೆ ನಾನು ತಂದೆ ಸ್ಥಾನದಲ್ಲಿ ಇದ್ದೇನೆ ಎಂದು ಆಶೀರ್ವದಿಸಿದ್ದರು. ನೀವೂ ಕೂಡ ಹೇಳಿದ ಮಾತು ಈಡೇರಿಸಿಲ್ಲ. ಮಂಜುನಾಥನ ಸನ್ನಿಧಿಗೆ ಬನ್ನಿ ಎಂದು ಲಕ್ಷ್ಮಣ್ ಸವದಿ ಸವಾಲು ಹಾಕಿದರು.

ಕುಮಾರಸ್ವಾಮಿಗೆ ವಚನಭ್ರಷ್ಟ ಎಂದು ಹೇಳುತ್ತಿರಿ, ನೀವು ಏನು? ಬನ್ನಿ ಮಂಜುನಾಥ್ ಸನ್ನಿಧಿಗೆ, ನನಗೆ ನೀವು ಈ ಬಗ್ಗೆ ಮಾತು ನೀಡಿಲ್ಲ ಎಂದರೆ ನಾನು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ. ಇನ್ನು ಈ ಬಾರಿಯ ಚುನಾವಣೆಗೆ ನನಗೆ ಟಿಕೆಟ್ ಇಲ್ಲ ಎಂದು ಗೆಳೆಯ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಭಲೇ ಬಸವರಾಜ್.. ಒಳ್ಳೆಯ ಮಾತು ಹೇಳಿದ್ದೀರಿ ಎಂದು ಸವದಿ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ:ಅಥಣಿಯಲ್ಲಿ ಮಹೇಶ ಕುಮಟಳ್ಳಿಗೆ ಬಿಜೆಪಿ ಮಣೆ... ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನಡೆ ನಿಗೂಢ

Last Updated : Apr 12, 2023, 9:25 AM IST

ABOUT THE AUTHOR

...view details