ಅಥಣಿ: ಕಳೆದ ಜನವರಿ 4 ರಂದು ಸಿಎಂ ಯಡಿಯೂರಪ್ಪ ಅವರು ಮುಂಬೈ ಕರ್ನಾಟಕ ಭಾಗದ ಶಾಸಕ ಸಭೆ ಕರೆದು ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರ ಸಮಸ್ಯೆ ಆಲಿಸಿದ್ದರು. ಅಲ್ಲಿ ಅಥಣಿ ಮತ ಕ್ಷೇತ್ರದ ಪ್ರಮುಖ ಎರಡು ಬೇಡಿಕೆಯನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಪ್ರತಿಕ್ರಿಯೆ ನೀಡಿದ್ದಾರೆ.
ಎರಡು ಪ್ರಮುಖ ಬೇಡಿಕೆಗಳನ್ನು ಸಿಎಂ ಗಮನಕ್ಕೆ ತರಲಾಗಿದೆ: ಮಹೇಶ್ ಕುಮಟಳ್ಳಿ - ಸಿಎಂ ಯಡಿಯೂರಪ್ಪ
ಶಾಸಕ ಮಹೇಶ್ ಕುಮಟಳ್ಳಿ ಅವರು ಅಥಣಿ ತಾಲೂಕಿನ ಶೇಗುಣಸಿ, ಸಪ್ತಸಾಗರ, ದರೂರ, ಸವದಿ ದರ್ಗಾದ ಗ್ರಾಮಗಳಲ್ಲಿ ಒಟ್ಟು 1.60 ಕೋಟಿ ರೂಪಾಯಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿದರು.
![ಎರಡು ಪ್ರಮುಖ ಬೇಡಿಕೆಗಳನ್ನು ಸಿಎಂ ಗಮನಕ್ಕೆ ತರಲಾಗಿದೆ: ಮಹೇಶ್ ಕುಮಟಳ್ಳಿ Mahesh Kumathalli inaugurates development works in athani](https://etvbharatimages.akamaized.net/etvbharat/prod-images/768-512-10207581-thumbnail-3x2-nin.jpg)
ಅಥಣಿ ತಾಲೂಕಿನ ಶೇಗುಣಸಿ, ಸಪ್ತಸಾಗರ, ದರೂರ, ಸವದಿ ದರ್ಗಾದ ಗ್ರಾಮಗಳಲ್ಲಿ ಒಟ್ಟು 1.60 ಕೋಟಿ ರೂಪಾಯಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು.ಈ ಬಾರಿ ಅತಿವೃಷ್ಟಿಯಿಂದ ಸಾಕಷ್ಟು ರಸ್ತೆಗಳು ಹದಗೆಟ್ಟಿದ್ದ ಕಾರಣ ಈ ಭಾಗದ ರಸ್ತೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಬಗ್ಗೆ ಸಿಎಂ ಗಮನಕ್ಕೆ ತರಲಾಗಿದೆ. ಹಾಗೆ 60 ಕೋಟಿ ರೂಪಾಯಿ ಬೇಡಿಕೆ ಇಡಲಾಗಿತ್ತು. ಸರ್ಕಾರ ತುರ್ತಾಗಿ 6 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಇದರಿಂದ ಎಲ್ಲೆಲ್ಲಿ ತುರ್ತು ಕೆಲಸಗಳು ಆಗಬೇಕೋ ಅಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಸಿಎಂ ಯಡಿಯೂರಪ್ಪನವರು ಮುಂಬೈ ಕರ್ನಾಟಕ ಶಾಸಕರ ಸಭೆ ಕರೆದ ಸಮಯದಲ್ಲಿ ಪ್ರಮುಖ ಎರಡು ಬೇಡಿಕೆಯನ್ನು ಗಮನಕ್ಕೆ ತರಲಾಗಿದೆ. ಒಂದು ಕೃಷ್ಣಾ ನದಿ ತೀರದ ಸವಳು-ಜವಳು ಹಾಗೂ ಕಕಮರಿ ಕೋಟ್ಟಲಗಿ ಏತ ನೀರಾವರಿ ಯೋಜನೆ. ಸದ್ಯದಲ್ಲೇ ಎರಡು ಯೋಜನೆಗಳು ಜಾರಿಗೆ ಬರುತ್ತವೆ, ಸಿಎಂ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ ಎಂದರು.