ಚಿಕ್ಕೋಡಿ:ಭಾರಿ ಮಳೆಯಿಂದ ಪ್ರವಾಹಕ್ಕೊಳಗಾದ ಚಿಕ್ಕೋಡಿಯ ಗ್ರಾಮಗಳಿಗೆ, ಅಥಣಿ ಕ್ಷೇತ್ರದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಭೇಟಿ ನೀಡಿ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ - ಅಥಣಿ ತಾಲೂಕಿನ ರಡ್ಡೇರಹಟ್ಟಿ
ಅಥಣಿ ಮತಕ್ಷೇತ್ರದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಾಂತ್ವಾನ ಹೇಳಿದರು.

ಮಹೇಶ್ ಕುಮಟಳ್ಳಿ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಹಟ್ಟಿ ಪುನರ್ವಸತಿ ಕೇಂದ್ರಕ್ಕೆ ಕುಮಟಳ್ಳಿ ಭೇಟಿ ನೀಡಿ ಪರಿಶೀಲಿಸಿದರು. ಪ್ರವಾಹಕ್ಕೀಡಾದ ಜನರು, ನಮಗೆ ಸೂಕ್ತ ವ್ಯವಸ್ಥೆ ಹಾಗೂ ಖಾಯಂ ನಿವಾಸ ನೀಡಿ ಎಂದು ಕುಮಟಳ್ಳಿ ಬಳಿ ಮನವಿ ಮಾಡಿಕೊಂಡರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಮಹೇಶ್ ಕುಮಟಳ್ಳಿ
ನಾನು ನಿಮಗೆ ಸೇವೆ ಮಾಡಲು ಸದಾ ಸಿದ್ದನಿದ್ದೇನೆ. ನಿಮಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು, ಸರ್ಕಾರದಿಂದ ಹಣ ತೆಗೆಯಬೇಕಾದದ್ದು ಅಷ್ಟು ಸುಲಭವಲ್ಲ ಆದರೂ ಕೂಡಾ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು .