ಶಾಸಕ ಮಹೇಶ್ ಕುಮಟಳ್ಳಿ ವಾಹನಕ್ಕೆ ಕನ್ನಡಪರ ಸಂಘಟನೆಗಳಿಂದ ಘೇರಾವ್.. - pro kannada activists stoped the Mahesh Kumatalli vehicle
ನನ್ನನ್ನು ಯಾರೂ ಘೇರಾವ್ ಹಾಕಲಿಲ್ಲ, ನಾನು ಅವರ ಸೇವಕನಷ್ಟೇ.. ಅವರು ಕ್ಷೇತ್ರದ ಕೆಲಸದ ಕುರಿತು ಕೇಳುತಿದ್ದಾರೆ, ನೀವು ತಪ್ಪಾಗಿ ಘೇರಾವ್ ಹಾಕಿದರು ಎಂದು ತಿಳಿಕೊಳ್ಳಬೇಡಿ, ನಮ್ಮ ಗ್ರಾಮಕ್ಕೆ ಬನ್ನಿ ಸಮಸ್ಯೆ ಆಲಿಸಿ ಎಂದು ಮನವಿ ಮಾಡಿದರು..
ಮಹೇಶ್ ಕುಮಟಳ್ಳಿ ವಾಹನಕ್ಕೆ ಕನ್ನಡಪರ ಸಂಘಟನೆಗಳಿಂದ ಘೇರಾವ್
ಅಥಣಿ :ತಾಲೂಕಿನ ಹಿಪ್ಪರಗಿ ಬ್ಯಾರೇಜ್ಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯ ಭೂಮಿಪೂಜೆ ನೆರವೇರಿಸಲು ಬಂದ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ರಸ್ತೆ ಮಧ್ಯದಲ್ಲಿ ತಡೆದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಗ್ರಾಮದ ಸಮಸ್ಯೆ ಆಲಿಸುವಂತೆ ಹಾಗೂ ಗ್ರಾಮಕ್ಕೆ ಭೇಟಿ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಒತ್ತಾಯಕ್ಕೆ ಮಣಿದ ಶಾಸಕರು, ಭೂಮಿ ಪೂಜೆ ಮಾರ್ಗ ಬದಲಾಯಿಸಿ ಸಮಸ್ಯೆ ಇರುವ ನಂದೇಶ್ವರ ಗ್ರಾಮಕ್ಕೆ ಭೇಟಿ ನೀಡಿ ರಸ್ತೆ ಹಾಗೂ ಕಳೆದ ವರ್ಷದ ಕೃಷ್ಣಾ ನದಿ ನೆರೆ ಸಂತ್ರಸ್ತರ ಪರಿಹಾರ ಕುರಿತು ಸಮಸ್ಯೆ ಆಲಿಸಿದರು.
ಈ ವಿಷಯದ ಕುರಿತು ಪ್ರತಿಕ್ರಿಯಿಸಿದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ನನ್ನನ್ನು ಯಾರೂ ಘೇರಾವ್ ಹಾಕಲಿಲ್ಲ, ನಾನು ಅವರ ಸೇವಕನಷ್ಟೇ.. ಅವರು ಕ್ಷೇತ್ರದ ಕೆಲಸದ ಕುರಿತು ಕೇಳುತಿದ್ದಾರೆ, ನೀವು ತಪ್ಪಾಗಿ ಘೇರಾವ್ ಹಾಕಿದರು ಎಂದು ತಿಳಿಕೊಳ್ಳಬೇಡಿ, ನಮ್ಮ ಗ್ರಾಮಕ್ಕೆ ಬನ್ನಿ ಸಮಸ್ಯೆ ಆಲಿಸಿ ಎಂದು ಮನವಿ ಮಾಡಿದರು. ಅದಕ್ಕಾಗಿ ನಾನು ನಂದೇಶ್ವರ ಗ್ರಾಮಕ್ಕೆ ಭೇಟಿ ನೀಡಿದೆ ಎಂದು ತಿಳಿಸಿದರು.