ಕರ್ನಾಟಕ

karnataka

ETV Bharat / state

ಮಹಾ ಸರ್ಕಾರದ ಬಿಕ್ಕಟ್ಟು: ರಮೇಶ್​ ಜಾರಕಿಹೊಳಿ ಬಿಜೆಪಿಗೆ ಅನುಕೂಲ ಮಾಡಿಕೊಡ್ತಾರೆ ಎಂದ ಶಾಸಕ - ಮಹಾ ಸರ್ಕಾರದಲ್ಲಿ ಆಪರೇಷನ್ ಕಮಲ ಕುರಿತು ಮಹೇಶ್​ ಕುಮಟಳ್ಳಿ ಪ್ರತಿಕ್ರಿಯೆ

ಶಿವಸೇನೆಯ ಶಾಸಕರು ಮಹಾರಾಷ್ಟ್ರದಲ್ಲಿ ಆಡಳಿತರೂಢ ಶಿವಸೇನೆ ಹಾಗೂ ಎನ್​ಸಿಪಿಯ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿ ರೆ‌ಸಾರ್ಟ್ ರಾಜಕಾರಣದತ್ತ ಮುಖಮಾಡಿದ್ದಾರೆ. ಈ ಬಂಡಾಯದ ಲಾಭ ಪಡೆಯಲು ಮಹಾರಾಷ್ಟ್ರದ ಬಿಜೆಪಿ ನಾಯಕರು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ‌.

ಮಹೇಶ್ ಕುಮಟಳ್ಳಿ
ಮಹೇಶ್ ಕುಮಟಳ್ಳಿ

By

Published : Jun 23, 2022, 7:25 PM IST

ಅಥಣಿ(ಬೆಳಗಾವಿ):ರಮೇಶ್ ಜಾರಕಿಹೊಳಿ ಎಲ್ಲೆಡೆ ತಮ್ಮ ಸಂಪರ್ಕ ಹೊಂದಿರುವ ನಾಯಕರಾಗಿದ್ದಾರೆ. ಅವರು ಪಕ್ಷದಲ್ಲಿ ತಮ್ಮದೇ ಆದ ಕಾರ್ಯಚಟುವಟಿಕೆಗಳಿಂದ ಗುರುತಿಸಿಕೊಂಡಿದ್ದಾರೆ‌. ಯಾವ ಯಾವ ಸಮಯದಲ್ಲಿ ಪಕ್ಷಕ್ಕೆ ಅವರ ಅವಶ್ಯಕತೆ ಇರುತ್ತದೆಯೋ ಆಗ ಅವರು ಅನುಕೂಲ ಮಾಡಿಕೊಡುತ್ತಾರೆ. ಅಲ್ಲದೆ ಸದ್ಯ ಮಹಾರಾಷ್ಟ್ರ ಬಂಡಾಯ ಶಾಸಕರ ಸಂಪರ್ಕದಲ್ಲೂ ರಮೇಶ್ ಜಾರಕಿಹೊಳಿ ಇದ್ದಾರೆ ಎಂದು ಹೇಳುವ ಮೂಲಕ ಮಹಾ ಸರ್ಕಾರದಲ್ಲಿ ಆಪರೇಷನ್ ಕಮಲಕ್ಕೆ ಗೋಕಾಕ್ ಸಾಹುಕಾರ್ ಪಾತ್ರ ವಹಿಸಿದ್ದಾರೆ ಎಂದು ಪರೋಕ್ಷವಾಗಿ ಮುಗುಳ್ನಗೆಯಲ್ಲಿಯೇ ಶಾಸಕ ಮಹೇಶ್​ ಕುಮಟಳ್ಳಿ ಹೇಳಿದರು.

ಶಾಸಕ ಮಹೇಶ್​ ಕುಮಟಳ್ಳಿ ಪ್ರತಿಕ್ರಿಯೆ

ಶಿವಸೇನೆಯ ಶಾಸಕರು ಮಹಾರಾಷ್ಟ್ರದಲ್ಲಿ ಆಡಳಿತರೂಢ ಶಿವಸೇನೆ ಹಾಗೂ ಎನ್​ಸಿಪಿಯ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿ ರೆ‌ಸಾರ್ಟ್ ರಾಜಕಾರಣದತ್ತ ಮುಖಮಾಡಿದ್ದಾರೆ. ಈ ಬಂಡಾಯದ ಲಾಭ ಪಡೆಯಲು ಮಹಾರಾಷ್ಟ್ರದ ಬಿಜೆಪಿ ನಾಯಕರು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ‌. ಇದರ ಬೆನ್ನಲ್ಲೇ ಅಥಣಿಯ ಶಾಸಕರಾದ ಮಹೇಶ್ ಕುಮಟಳ್ಳಿ ಅವರು ಗುರುವಾರ ಕಕಮರಿ ಗ್ರಾಮದಲ್ಲಿ ನೀಡಿರುವ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪಕ್ಷದ ಕಾರ್ಯಗಳಲ್ಲಿ ಎಲ್ಲರೂ ಸಕ್ರಿಯವಾಗಿದ್ದೇವೆ. ಅಲ್ಲದೆ ಎಲ್ಲೇ ಬಿಜೆಪಿ ಸರ್ಕಾರ ರಚನೆಯಾಗಿದ್ದರೂ ಅದರ ಕ್ರೆಡಿಟ್ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯ ರಚನೆ ವಿಚಾರ: ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಪ್ರತ್ಯೇಕ ರಾಜ್ಯದ ವಿಚಾರ ಮುನ್ನೆಲೆಗೆ ಬರುತ್ತದೆ. ಸಚಿವ ಉಮೇಶ್ ಕತ್ತಿ ಯಾವ ವಿಚಾರ ಇಟ್ಟುಕೊಂಡು ಮಾತನಾಡಿದ್ದಾರೆ ಅನ್ನೋದು ಗೊತ್ತಿಲ್ಲ ಎಂದರು.

ವಿಜಯಪುರ ಜಿಲ್ಲೆಗೆ ಬರಗಾಲದ ಪ್ರದೇಶ ಎಂದು ಘೋಷಣೆ ಮಾಡಿದ್ದಾರೆ. ವಿಜಯಪೂರ ಜಿಲ್ಲೆಗೆ ಹೊಂದಿರುವ ಅಥಣಿ ಭಾಗವನ್ನು ಬರಗಾಲದ ಪ್ರದೇಶ ಎಂದು ಘೋಷಣೆ ಮಾಡುವಂತೆ ಹಲವು ಬಾರಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಯಾವಾಗ ಪ್ರತ್ಯೇಕ ರಾಜ್ಯ ಅಥವಾ ಪ್ರತ್ಯೇಕ ಜಿಲ್ಲೆ ರಚನೆ ಮಾಡುತ್ತಾರೆ ಅನ್ನೋದರ ಬಗ್ಗೆ ಗೊತ್ತಿಲ್ಲ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಪ್ರತಿಕ್ರಿಯಿಸಿದರು.

ಓದಿ:ಇ-ವಿಧಾನ ಯೋಜನೆ ಹೆಸರಲ್ಲಿ 254 ಕೋಟಿ ರೂ. ಹಗರಣ: ರಮೇಶ್ ಬಾಬು

For All Latest Updates

TAGGED:

ABOUT THE AUTHOR

...view details