ಚಿಕ್ಕೋಡಿ: ಅಥಣಿ ಮತಕ್ಷೇತ್ರದ ಮತದಾರರಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಅಥಣಿ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಧನ್ಯವಾದ ಸಲ್ಲಿಸಿದರು.
ಲಕ್ಷ್ಮೀ ಹೆಬ್ಬಾಳ್ಕರ್ಗೆ ಹೊಸ ಹೆಸರಿಟ್ಟು ಕುಮಟಳ್ಳಿ-ಜಾರಕಿಹೊಳಿ ವ್ಯಂಗ್ಯ - ಶಾಸಕ ಮಹೇಶ್ ಕುಮಟಳ್ಳಿ
ಅಥಣಿ ಮತಕ್ಷೇತ್ರದ ಮತದಾರರಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಶಾಸಕ ಮಹೇಶ್ ಕುಮಟಳ್ಳಿ ಧನ್ಯವಾದ ಸಲ್ಲಿಸಿದ್ದಾರೆ. ಇದೇ ವೇಳೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಹೊಸ ಹೆಸರೊಂದನ್ನು ಇಡುವ ಮೂಲಕ ಉಭಯ ಶಾಸಕರು ವ್ಯಂಗ್ಯವಾಡಿದ್ದಾರೆ.
ಮಹೇಶ್ ಕುಮಟಳ್ಳಿ
ಬೆಳಗಾವಿಯ ಆರ್ಪಿಡಿ ಕಾಲೇಜಿನಲ್ಲಿ ಉಪಚುನಾವಣೆ ಫಲಿತಾಂಶ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಹಣ ತೆಗೆದುಕೊಂಡು ಹೋಗಿದ್ದೇನೆ, ಅಧಿಕಾರದ ಆಸೆಗಾಗಿ ಹೋಗಿದ್ದಾನೆ ಎನ್ನುವ ಮಾತುಗಳನ್ನು ಸ್ಪಷ್ಟವಾಗಿ ತಳ್ಳಿಹಾಕುತ್ತೇವೆ. ಆಪಾದನೆ ಮಾಡಿದವರ ಮಾತಿಗೆ, ಪ್ರತಿಕ್ರಿಯೆಗೆ, ಆರೋಪಕ್ಕೆ ಪ್ರಜ್ಞಾವಂತ ಮತದಾರರೇ ತಕ್ಕ ಪಾಠ ಕಲಿಸಿದ್ದಾರೆ ಎಂದರು.
Last Updated : Dec 9, 2019, 8:53 PM IST