ಅಥಣಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳ ಕಾಮಗಾರಿಗಳ ಉದ್ಘಾಟನೆಯನ್ನು ಶಾಸಕ ಮಹೇಶ್ ಕುಮಟಳ್ಳಿ ನೆರವೇರಿಸಿದರು.
ವಿವಿಧ ಯೋಜನೆಗಳ ಕಾಮಗಾರಿ ಉದ್ಘಾಟನೆ ಮಾಡಿದ ಶಾಸಕ ಮಹೇಶ್ ಕುಮಟಳ್ಳಿ - Water Resources Plan of the Department of Agriculture
ಅಥಣಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿ ಇಲಾಖೆಯ ಜಲಾಮೃತ ಯೋಜನೆಯಡಿ ಒಡ್ಡು ನಿರ್ಮಾಣಕ್ಕೆ ಚಾಲನೆ, ಕೃಷಿ ಯಾಂತ್ರೀಕರಣ ಯೋಜನೆಯಡಿ ನಿರ್ಮಾಣಗೊಂಡ ಸಮುದಾಯ ಭವನ ಕಟ್ಟಡ ಉದ್ಘಾಟನೆ, ಶೆಡ್ ನಿರ್ಮಾಣಕ್ಕೆ ಭೂಮಿಪೂಜೆಯನ್ನು ಶಾಸಕ ಮಹೇಶ್ ಕುಮಟಳ್ಳಿ ನೆರವೇರಿಸಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೃಷಿ ಇಲಾಖೆಯ ಜಲಾಮೃತ ಯೋಜನೆಯಡಿ ಒಡ್ಡು ನಿರ್ಮಾಣಕ್ಕೆ ಚಾಲನೆ, ಕೃಷಿ ಯಾಂತ್ರೀಕರಣ ಯೋಜನೆಯಡಿ ನಿರ್ಮಾಣಗೊಂಡ ಸಮುದಾಯ ಭವನ ಕಟ್ಟಡ ಉದ್ಘಾಟನೆ, ಶೆಡ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಬೆಳೆ ದರ್ಶಕ ಆ್ಯಪ್ ಮೂಲಕವೇ ಸರ್ಕಾರದ ಸವಲತ್ತುಗಳು ಅನುಷ್ಠಾನಗೊಳ್ಳುತ್ತಿರುವುದರಿಂದ ರೈತರು ಬೆಳೆದ ಬೆಳೆಯ ಮಾಹಿತಿಯ ಪಾರದರ್ಶಕವಾಗಿರಲಿದೆ ಎಂದರು.
ಅಲ್ಲದೆ 2 ವರ್ಷದಿಂದ ಕೆಲ ಕೂಲಿ ಕಾರ್ಮಿಕರಿಗೆ 25 ದಿನಗಳ ಕೂಲಿ ನೀಡುತ್ತಿಲ್ಲವೆಂಬ ದೂರು ಬಂದಿದೆ. 3 ದಿನದಲ್ಲಿ ಅವರಿಗೆ ಕೂಲಿ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಇನ್ನು ಕೊರೊನಾ ವೈರಸ್ ಬಗ್ಗೆ ಮಾತನಾಡಿ, ಇದರಿಂದ ದೂರ ಉಳಿಯಲು ಸಾಮಾಜಿಕ ಅಂತರವೊಂದೇ ಮಾರ್ಗ ಎಂದರು.