ಬೆಳಗಾವಿ:ಅಕ್ಟೋಬರ್ 9ಕ್ಕೆ ರಾಜ್ಯಾದ್ಯಂತ ಸರ್ಕಾರ ಆಯೋಜಿಸುವ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಲು ರಾಜ್ಯ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಗೋಕಾಕ್‍ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವಾಲ್ಮೀಕಿ ಸಮಾಜಕ್ಕೆ 7.5 ಮೀಸಲಾತಿ ಕೊಡಲು ವಿಳಂಬ ಮಾಡುತ್ತಿದೆ. ಹೀಗಾಗಿ ರಾಜ್ಯಾದ್ಯಂತ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಬಹಿಷ್ಕಾರ ಹಾಕಲಾಗಿದೆ. ಆದರೆ, ಖಾಸಗಿ ಕಾರ್ಯಕ್ರಮಕ್ಕೆ ಯಾವುದೇ ನಿರ್ಬಂಧವಿಲ್ಲ. ಪ್ರಸನ್ನನಾನಂದಪುರಿ ಸ್ವಾಮೀಜಿ ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ಕಾರ ಹೋರಾಟಕ್ಕೆ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. 2ವರ್ಷಗಳಿಂದ ಹೋರಾಟ ನಡೆಸಿದರು ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಬಹಿಷ್ಕಾರ ನಿರ್ಧಾರ ಸಚಿವರಾಗಿ 24ಗಂಟೆಯಲ್ಲಿ ಮೀಸಲಾತಿ ಹೆಚ್ಚಿಸುತ್ತೇನೆ ಎಂದು ಹೇಳಿಕೆ ನೀಡಿದ್ದ ಬಿ. ಶ್ರೀರಾಮುಲು ಅವರ ಸಮಯ ಈಗಾಗಲೇ ಮುಗಿದು ಹೋಗಿದೆ. ಅವರ ಅಧಿಕಾರಾವಧಿ ಕೂಡ ಮುಗಿಯಲು ಬಂದಿದೆ. 24ತಾಸು ಹೇಳಿದ್ದರೂ ಆದರೆ 24ತಿಂಗಳು ಆಗುತ್ತಾ ಬಂದಿದೆ. ಅದು ಕೇವಲ ರಾಜಕೀಯ ಆಶ್ವಾಸನೆ ಮಾತ್ರ ಎಂದು ಸಚಿವ ಶ್ರೀರಾಮುಲುಗೆ ತಿರುಗೇಟು ಕೊಟ್ಟರು.
ಭಾಷಣಕಾರರು ಜಾರಕಿಹೊಳಿ ಕುಟುಂಬ ಕೂಡಿ ಸರ್ಕಾರ ಬೀಳಿಸಿದರು ಎಂದು ಹೇಳಿದ್ದರು, ಅದಕ್ಕೆ ಪ್ರತಿಕ್ರಿಯಿಸಿದ್ದೆ. ಜಾರಕಿಹೊಳಿ ಕುಟುಂಬದ ಎಲ್ಲರೂ ಸೇರಿ ಸರ್ಕಾರ ಕೆಡವಿಲ್ಲ. ಬಾಲಚಂದ್ರ, ಲಖನ್‍ಗೂ ಸಂಬಂಧ ಇಲ್ಲ. ನಮಗೂ ಸಂಬಂಧ ಇಲ್ಲ. ಸಂಬಂಧ ಇರೋದು ರಮೇಶ ಜಾರಕಿಹೊಳಿಗೆ ಮಾತ್ರ. ಒಬ್ಬರು ಮಾಡಿದ್ದಾರೆ ಅವರಿಗೆ ಮಾತ್ರ ಹೇಳಬೇಕು. ಕುಟುಂಬ ಎಂದರೆ ತಪ್ಪು ಸಂದೇಶ ಹೋಗುತ್ತದೆ ಎಂದರು.
ಇದನ್ನೂ ಓದಿ :ರಮೇಶ್ ಜಾರಕಿಹೊಳಿಗೆ ಸರ್ಕಾರ ಉರುಳಿಸುವ ಶಕ್ತಿ ಇದೆ.. ಸತೀಶ್ ಜಾರಕಿಹೊಳಿ ಹೇಳಿಕೆ..!