ಚಿಕ್ಕೋಡಿ:ಕೊರೊನಾ ಭೀತಿಯಿಂದಾಗಿ 5 ವರ್ಷಕ್ಕೊಮ್ಮೆ ನಡೆಯುತ್ತಿದ್ದ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ ರದ್ದಾಗಿದೆ. ಮೇ 14ರಂದು ನಡೆಯಬೇಕಿದ್ದ ರಾಯಬಾಗ ಗ್ರಾಮ ದೇವತೆ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರೆಯನ್ನು ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ.
ಐದು ವರ್ಷಕ್ಕೊಮ್ಮೆ ನಡೆಯುವ ರಾಯಬಾಗದ ಮಹಾಲಕ್ಷ್ಮೀ ದೇವಿ ಜಾತ್ರೆ ರದ್ದು - ಮಹಾಲಕ್ಷ್ಮಿ ದೇವ ಬಿ ಜಾತ್ರೆ
ದೇಶದಾದ್ಯಂತ ಕೊರೊನಾ ಭೀತಿ ಹಿನ್ನೆಲೆ ಲಾಕ್ಡೌನ್ ಜಾರಿ ಮಾಡಲಾಗಿದೆ. ಇದರಿಂದ ದೇಶದ ಎಲ್ಲಾ ದೇವಾಲಯಗಳು ಬಾಗಿಲು ಹಾಕಿವೆ. ಎಲ್ಲಾ ಜಾತ್ರಾ ಮಹೋತ್ಸವಗಳು ರದ್ದಾಗಿವೆ. ಇದೀಗ ಈ ಸಾಲಿಗೆ ಚಿಕ್ಕೋಡಿಯ ರಯಬಾಗದ ಗ್ರಾಮ ದೇವತೆ ಮಹಾಲಕ್ಷ್ಮಿ ದೇವಿ ಜಾತ್ರೆಯೂ ಸೇರಿಕೊಂಡಿದೆ.
ಐದು ವರ್ಷಕೊಮ್ಮೆ ನಡೆಯುವ ರಾಯಬಾಗದ ಮಹಾಲಕ್ಷ್ಮೀದೇವಿ ಜಾತ್ರೆ ರದ್ದು
ಪ್ರತಿ ಐದು ವರ್ಷಕ್ಕೊಮ್ಮೆ ಈ ಜಾತ್ರೆ ನಡೆಯುತ್ತದೆ. ಕೊರೊನಾ ಮಹಾಮಾರಿಯನ್ನು ಹೋಗಲಾಡಿಸುವ ಸಲುವಾಗಿ ದೇವರಲ್ಲಿ ಪ್ರಾರ್ಥಿಸಲು ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರು ಏ. 28 ಹಾಗೂ ಮೇ. 1, 5, 8 ಮತ್ತು 12ರಂದು ಐದು ವಾರ ಪೂಜೆ ಮಾಡಿ ವ್ರತ ಪಾಲಿಸಬೇಕಿದೆ. ಮೇ 15ರಂದು ಶ್ರೀ ಮಹಾಲಕ್ಷ್ಮೀ ದೇವಿಗೆ ಅಂಬಲಿ, ಕಿಚಡಿ ಮಾಡಿ ಮನೆಯಲ್ಲಿಯೇ ನೈವೇದ್ಯ ಸಮರ್ಪಿಸಬೇಕು ಎಂದು ಜಾತ್ರಾ ಸಮಿತಿಯವರು ಕೋರಿದ್ದಾರೆ.