ಕರ್ನಾಟಕ

karnataka

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯಲ್ಲಿ ಪೊಲೀಸರ ಕ್ರಮ ಸರಿ ಎಂದ ಮ್ಯಾಜಿಸ್ಟ್ರೇಟ್: ಆರಗ ಜ್ಞಾನೇಂದ್ರ

By

Published : Dec 23, 2022, 12:18 PM IST

2020ರಲ್ಲಿ ನಡೆದ ಕೆಜಿ ಹಳ್ಳಿ‌‌, ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖೆಗೆ ನೀಡಲಾಗಿತ್ತು. ನಿನ್ನೆ ಸಂಪುಟ ಸಭೆಯಲ್ಲಿ ತನಿಖಾ ವರದಿ ಮುಂದಿಡಲಾಗಿದ್ದು, ಇಲ್ಲೂ ಒಪ್ಪಿಗೆ ಸೂಚಿಸಲಾಗಿದೆ.

Home Minister Araga Jnanendra
ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು/ಬೆಳಗಾವಿ: ಕೆ.ಜಿ‌ ಹಳ್ಳಿ, ಡಿ ಜೆ‌ ಹಳ್ಳಿಯಲ್ಲಿ ಗಲಭೆ ನಿಯಂತ್ರಣಕ್ಕೆ ನಡೆದ ಪೊಲೀಸ್ ಗೋಲಿಬಾರ್ ಹಾಗೂ ಪೊಲೀಸರ ನಡೆ ಸರಿಯಾಗಿದೆ ಎಂಬುದಾಗಿ ಮ್ಯಾಜಿಸ್ಟ್ರೇಟ್ ವರದಿ ನೀಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಬೆಳಗಾವಿ ಸುವರ್ಣಸೌಧದಲ್ಲಿ ಮಾತನಾಡಿದ ಅವರು,‌ ಘಟನೆಯ ಬಗ್ಗೆ ತನಿಖೆ ನಡೆಸಲು ತನಿಖಾಧಿಕಾರಿಗಳನ್ನು ನೇಮಿಸಲಾಗಿತ್ತು. ಆ ತನಿಖೆಯ ವರದಿ ಸಲ್ಲಿಕೆಯಾಗಿದೆ.‌ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿಯಲ್ಲಿ 2020ರ ಆಗಸ್ಟ್​ 11ರಂದು ನಡೆದ ಅಹಿತಕರ ಘಟನೆಗಳ ಸಂಬಂಧ ಮ್ಯಾಜಿಸ್ಟೀರಿಯಲ್ ವಿಚಾರಣಾ ವರದಿಗೆ ಒಪ್ಪಿಗೆ ಸೂಚಿಸಲಾಗಿದೆ.

ಘಟನೆ ವೇಳೆ ಗೋಲಿಬಾರ್ ಆಗಿತ್ತು. ಇದರಲ್ಲಿ ಮೂವರು ಸಾವನ್ನಪ್ಪಿದ್ದರು. ಆ ಸಂದರ್ಭದಲ್ಲಿ ಪೊಲೀಸರು ತೆಗೆದುಕೊಂಡ ನಿರ್ಧಾರ ಸರಿ ಇತ್ತು. ಗಲಭೆಯಲ್ಲಿ ಸಾವಿರಾರು ವಾಹನಗಳಿಗೆ ಡ್ಯಾಮೇಜ್ ಆಗಿತ್ತು. ಆಸ್ತಿಪಾಸ್ತಿ ನಷ್ಟ ಸಂಭವಿಸಿತ್ತು. ಹಾಗಾಗಿ ಶೂಟೌಟ್ ಮಾಡಲಾಗಿತ್ತು.‌ ಗೋಲಿಬಾರ್ ಮಾಡಿದ್ದು ಸರಿ ಎನ್ನುವ ರಿಪೋರ್ಟ್ ನೀಡಲಾಗಿದೆ ಎಂದು ಹೇಳಿದರು.

2020ರಲ್ಲಿ ನಡೆದ ಕೆಜಿ ಹಳ್ಳಿ‌‌, ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖೆಗೆ ನೀಡಲಾಗಿತ್ತು. ಈ ಬಗ್ಗೆ ತನಿಖಾ ವರದಿಯನ್ನು ಗುರುವಾರ ಸಂಪುಟ ಸಭೆ ಮುಂದಿಡಲಾಗಿತ್ತು. ಸಂಪುಟ ಸಭೆಯಲ್ಲೂ ವರದಿಗೆ ಒಪ್ಪಿಗೆ ಸೂಚಿಸಲಾಗಿದೆ.

ಇದನ್ನೂ ಓದಿ:ಡಿ.ಜೆ. ಹಳ್ಳಿ ಗಲಭೆ ಎನ್ಐಎ ತನಿಖೆಗೆ ವಹಿಸಲು ಕೋರಿ ಪಿಐಎಲ್: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ABOUT THE AUTHOR

...view details