ಚಿಕ್ಕೋಡಿ:ಚಿಕ್ಕೋಡಿ ಜಿಲ್ಲೆಯಾದರೆ 25 ಲಕ್ಷ ಜನರಿಗೆ ಅನಕೂಲದ ಜೊತೆಗೆ ಹಲವಾರು ಕಾಲೇಜುಗಳು ಸ್ಥಾಪನೆಯಾಗುತ್ತವೆ. ಜೊತೆಗೆ ಕೈಗಾರಿಕೆಗಳು ಬರುವುದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಆರ್.ಬಿ.ಸಂಗಪ್ಪಗೋಳ ಹೇಳಿದರು.
ಚಿಕ್ಕೋಡಿ ಜಿಲ್ಲೆಯಾದರೆ 25 ಲಕ್ಷ ಜನರಿಗೆ ಅನುಕೂಲ: ಆರ್.ಬಿ.ಸಂಗಪ್ಪಗೋಳ - ಚಿಕ್ಕೋಡಿ ಜಿಲ್ಲೆಯಾಗಬೇಕು ಲೆಟೆಸ್ಟ್ ನ್ಯೂಸ್
ಚಿಕ್ಕೋಡಿ ಜಿಲ್ಲೆಯಾದರೆ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಆರ್.ಬಿ ಸಂಗಪ್ಪಗೋಳ ಹೇಳಿದರು.
ಚಿಕ್ಕೋಡಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಂಗಪ್ಪಗೋಳ, ಹಲವರ ರಾಜಕೀಯದಿಂದಾಗಿ ಚಿಕ್ಕೋಡಿ ಜಿಲ್ಲೆಯಾಗುತ್ತಿಲ್ಲ. ಅಂತಹ ರಾಜಕಾರಣಿಗಳಿಗೆ ಜನರು ಪಾಠ ಕಲಿಸುತ್ತಿದ್ದಾರೆ. ಬಿಜೆಪಿ ನಾಯಕರು ಆಶ್ವಾಸನೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಚಿಕ್ಕೋಡಿಗೆ ಬಂದಾಗ 1 ಲಕ್ಷ ಜನರ ಸಾಕ್ಷಿಯಾಗಿ ಈಗಿನ ಎಂಪಿ ಅಣ್ಣಾಸಾಹೇಬ ಜೊಲ್ಲೆ ಮಾತು ನೀಡಿದ್ದರು. ಆದರೆ, ಅದು ಈವರೆಗೆ ಆಗದಿರುವುದು ನಮಗೆ ಬೇಸರ ತರಿಸಿದೆ. ಮತ್ತೆ ನಾವು ಪ್ರತಿಭಟನೆಗೆ ಇಳಿಯೋದು ಬೇಡ, ಅದಕ್ಕಾಗಿ ರಾಜಕಾರಣಿಗಳು ಸೇರಿ ಚಿಕ್ಕೋಡಿಯನ್ನು ಜಿಲ್ಲೆ ಮಾಡಬೇಕು ಎಂದು ಹೇಳಿದರು.
ಆನಂದಸಿಂಗ್ ಹೇಗೆ ಜಿಲ್ಲೆಯಾಗಲೂ ಹೋರಾಡುತ್ತಿದ್ದಾರೆ, ರೆಡ್ಡಿ ಹರಪ್ಪನಹಳ್ಳಿ ಜಿಲ್ಲೆಯಾಗಬೇಕು ಅಂತಾರೆ, ವಿಶ್ವನಾಥ ಹುಣಸೂರ ಜಿಲ್ಲೆ ಆಗಬೇಕು ಅಂತಾರೆ, ಕುಮಾರಸ್ವಾಮಿ ಆಗಿನ ವೇಳೆಗೆ ಮಧುಗಿರಿ ಜಿಲ್ಲೆ ಆಗಬೇಕು ಅಂತಾರೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಚಿಕ್ಕೋಡಿ ಜಿಲ್ಲೆಯಾಗಬೇಕು ಅಂತಾ ಹೇಳುವವರು ಯಾರೂ ಇಲ್ಲವೆನ್ನುವುದು ಇಲ್ಲಿನ 25 ಲಕ್ಷ ಜನರಿಗೆ ವಿಷಾದನಿಯವೆನಿಸುತ್ತದೆ. ದಯಮಾಡಿ ಜನರ ಅನಕೂಲಕ್ಕಾಗಿ ಚಿಕ್ಕೋಡಿಯನ್ನು ಜಿಲ್ಲೆ ಮಾಡಿ ಎಂದು ಈ ಮೂಲಕ ಮನವಿ ಮಾಡಿದರು.