ಕರ್ನಾಟಕ

karnataka

ETV Bharat / state

ಬಸ್​ ಕಾಯುತ್ತಾ ನಿಂತಿದ್ದ ವಿದ್ಯಾರ್ಥಿಗಳಿಗೆ ಕಚ್ಚಿದ ಹುಚ್ಚು ನಾಯಿ - ಹುಚ್ಚು ನಾಯಿ ದಾಳಿಯಿಂದ 15 ಜನರಿಗೆ ಗಾಯ

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್​ಗಾಗಿ ಕಾಯುತ್ತಾ ನಿಂತಿದ್ದಾಗ ಹುಚ್ಚು ನಾಯಿ ವಿದ್ಯಾರ್ಥಿ ಹಾಗೂ ಸಾರ್ವಜನಿಕರ ಮೇಲೆ ದಾಳಿ‌ ಮಾಡಿದ ಘಟನೆಚಿಕ್ಕೋಡಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆದಿದೆ.

ಚಿಕ್ಕೋಡಿಯಲ್ಲಿ ಹುಚ್ಚು ನಾಯಿ ದಾಳಿ

By

Published : Sep 11, 2019, 8:15 PM IST

ಚಿಕ್ಕೋಡಿ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್​ಗಾಗಿ ಕಾಯುತ್ತಾ ನಿಂತಿದ್ದಾಗ ಹುಚ್ಚು ನಾಯಿ ವಿದ್ಯಾರ್ಥಿ ಹಾಗೂ ಸಾರ್ವಜನಿಕರ ಮೇಲೆ ದಾಳಿ‌ ಮಾಡಿದ ಘಟನೆ ಚಿಕ್ಕೋಡಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆದಿದೆ.

ಚಿಕ್ಕೋಡಿಯಲ್ಲಿ ಹುಚ್ಚು ನಾಯಿ ದಾಳಿ

ಬಸವೇಶ್ವರ ವೃತದಲ್ಲಿ‌ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ದಿನಂಪ್ರತಿ ನಿಲ್ಲುವಂತೆ ಬಸ್​ಗಾಗಿ‌ ಕಾಯುತ್ತಾ ನಿಂತಾಗ ಹುಚ್ಚು ನಾಯಿಯೊಂದು ಬಂದು ದಾಳಿ‌ ಮಾಡಿದರ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು, ಇಬ್ಬರು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಸೇರಿದಂತೆ 15 ಜನರಿಗೆ ಕಚ್ಚಿದೆ. ಸ್ಥಳೀಯರಿಂದ ವಿದ್ಯಾರ್ಥಿನಿ ಹಾಗೂ ಮಹಿಳೆಯರ ರಕ್ಷಣೆ‌ ಮಾಡಲಾಗಿದ್ದು ನಾಯಿ ಹೊಡೆಯಲು ಮುಂದಾಗುತ್ತಿದ್ದಂತೆ ಹುಚ್ಚು ನಾಯಿ ಸ್ಥಳದಿಂದ ಓಡಿಹೋಗಿದೆ.

15 ಜನರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಚಿಕ್ಕೋಡಿ ಪುರಸಭೆ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details