ಕರ್ನಾಟಕ

karnataka

ETV Bharat / state

ರಾಜ್ಯದ ಹಲವೆಡೆ ಚಂದ್ರಗ್ರಹಣ ಗೋಚರ: ದೇವಾಲಯಗಳಲ್ಲಿ ಶುದ್ಧೀಕರಣ, ವಿಶೇಷ ಪೂಜೆ - ರಾಜ್ಯದ ಹಲವೆಡೆ ಚಂದ್ರಗ್ರಹಣ ಗೋಚರ

ರಾಜ್ಯದ ಹಲವೆಡೆ ಚಂದ್ರಗ್ರಹಣ ಗೋಚರಿಸಿದೆ. ಗ್ರಹಣ ಮುಗಿದ ಬಳಿಕ ದೇವಾಲಯಗಳನ್ನು ಶುದ್ಧೀಕರಿಸಿ, ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ.

chandragrahana-lunar-eclipse-2023
ರಾಜ್ಯದ ಹಲವೆಡೆ ಚಂದ್ರಗ್ರಹಣ ಗೋಚರ : ದೇವಾಲಯಗಳಲ್ಲಿ ಶುದ್ದೀಕರಣ..ವಿಶೇಷ ಪೂಜೆ

By ETV Bharat Karnataka Team

Published : Oct 29, 2023, 9:46 AM IST

Updated : Oct 29, 2023, 10:00 AM IST

ರಾಜ್ಯದ ಹಲವೆಡೆ ಚಂದ್ರಗ್ರಹಣ ಗೋಚರ: ದೇವಾಲಯಗಳಲ್ಲಿ ಶುದ್ಧೀಕರಣ, ವಿಶೇಷ ಪೂಜೆ

ಬೆಳಗಾವಿ: ಚಂದ್ರಗ್ರಹಣ ಮುಕ್ತಾಯವಾದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ಶುದ್ಧೀಕರಣ ಕಾರ್ಯ ಮತ್ತು ವಿಶೇಷ ಪೂಜೆಗಳು ನೆರವೇರಿದವು. ಈ ವರ್ಷದ ಕೊನೆಯ ಚಂದ್ರಗ್ರಹಣ ಶನಿವಾರ ಮಧ್ಯರಾತ್ರಿ 1 ಗಂಟೆ 05 ನಿಮಿಷಕ್ಕೆ ಆರಂಭಗೊಂಡು 2.24ಕ್ಕೆ ಅಂತ್ಯಗೊಂಡಿತು.

ಗ್ರಹಣ ಮೋಕ್ಷವಾಗುತ್ತಿದ್ದಂತೆ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಕಪಿಲೇಶ್ವರನಿಗೆ ಬಿಲ್ವ ಪತ್ರೆ ಮೂಲಕ ಅರ್ಚನೆ ಮಾಡಲಾಯಿತು. ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ಶನಿವಾರ ಸಾಯಂಕಾಲದಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಗ್ರಹಣ ಮುಗಿಯುತ್ತಿದ್ದಂತೆ ಇಡೀ ದೇವಸ್ಥಾ‌ನವನ್ನು ಸ್ವಚ್ಛಗೊಳಿಸಲಾಗಿದ್ದು, ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ದೇವಸ್ಥಾನ ಮಂಡಳಿಯವರು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಚಂದ್ರಗ್ರಹಣ

ಶಿವಮೊಗ್ಗದಲ್ಲಿ ಚಂದ್ರಗ್ರಹಣ ಗೋಚರ:ಮಲೆನಾಡಿನಲ್ಲಿ ಚಂದ್ರಗ್ರಹಣ ಗೋಚರಿಸಿದೆ. ಗ್ರಹಣದ ವೇಳೆ ಮೋಡಗಳು ಚಲಿಸುತ್ತಿದ್ದುದರಿಂದ ವೀಕ್ಷಣೆಗೆ ಸ್ವಲ್ಪಮಟ್ಟಿನ ಅಡ್ಡಿ ಉಂಟಾಗಿತ್ತು. ಚಂದ್ರನ ಮೇಲ್ಮೈ ಮೇಲೆ ಭೂಮಿಯ ನೆರಳು ಬಿದ್ದಾಗ ಗ್ರಹಣ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಸೂರ್ಯ, ಭೂಮಿ ಹಾಗೂ ಚಂದ್ರ ಒಂದೇ ರೇಖೆಯಲ್ಲಿ ಇರುತ್ತದೆ.

ಶನಿವಾರ ಸಂಜೆಯಿಂದಲೇ ಜಿಲ್ಲೆಯ ಬಹುತೇಕ ದೇವಾಲಯಗಳಲ್ಲಿ ಭಕ್ತರಿಗೆ ನಿರ್ಬಂಧ ಹೇರಲಾಗಿತ್ತು. ಗ್ರಹಣ ಮುಗಿದ ಬಳಿಕ ಬೆಳಿಗ್ಗೆ ದೇವಾಲಯಗಳನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಿ ವಿಶೇಷ ಪೂಜೆ ನೆರವೇರಿಸಲಾಗಿದೆ. ರಾಜ್ಯದ ಪ್ರಸಿದ್ದ ದೇವಾಲಯ ಸಿಗಂದೂರಿನ ಚೌಡೇಶ್ವರಿ ದೇವಾಲಯದಲ್ಲಿ ಎಂದಿನಂತೆ ಬೆಳಗಿನ ಜಾವ 4 ಗಂಟೆಗೆ ಪೂಜೆ ಪ್ರಾರಂಭವಾಗಿದೆ. ಹೋಮ, ಹವನಗಳು ನಡೆದವು. ಭಕ್ತರಿಗೆ ಚೌಡೇಶ್ವರಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ವಿಜಯಪುರದಲ್ಲಿ ಚಂದ್ರಗ್ರಹಣ: ವಿಜಯಪುರ ನಗರದ ಮನಗೂಳಿ ರಸ್ತೆಯ ರಿಂಗ್ ರೋಡ್ ಬಳಿ ಇರುವ ಶ್ರೀ ಚಿದಂಬರೇಶ್ವರ ದೇವಸ್ಥಾನದಲ್ಲಿ ಶುದ್ಧೀಕರಣ ಕಾರ್ಯ ನಡೆಯಿತು. ಅರ್ಚಕರಾದ ವಿಜಯ ಜೋಶಿ ನೇತೃತ್ವದಲ್ಲಿ ಹೋಮ-ಹವನಗಳು ನಡೆದವು. ಚಿದಂಬರೇಶ್ವರನಿಗೆ ವಿಶೇಷ ಪೂಜೆ ನಡೆಯಿತು. ನೂರಾರು ಭಕ್ತರು ಆಗಮಿಸಿದ್ದರು.

ಇದನ್ನೂ ಓದಿ:ಭಾರತ ಸೇರಿದಂತೆ ಜಗತ್ತಿನ ಹಲವೆಡೆ ವರ್ಷದ ಕೊನೆಯ ಚಂದ್ರಗ್ರಹಣ ಗೋಚರ; ಮೋಕ್ಷದ ನಂತರ ದೇವಾಲಯಗಳ ಶುದ್ಧೀಕರಣ, ವಿಶೇಷ ಪೂಜೆ

Last Updated : Oct 29, 2023, 10:00 AM IST

ABOUT THE AUTHOR

...view details