ಬೆಳಗಾವಿ:ಪ್ರೇಮಿಗಳ ದಿನದಂದೇ ಯುವ ಪ್ರೇಮಿಗಳು ನೇಣಿಗೆ ಕೊರಳೊಡ್ಡಿದ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದಿದೆ.
ಹಂಚಿನಾಳ ಗ್ರಾಮದ ಟ್ರ್ಯಾಕ್ಟರ್ ಶೆಡ್‌ನಲ್ಲಿ ಪ್ರೇಮಿಗಳು ನೇಣಿಗೆ ಶರಣಾಗಿದ್ದಾರೆ. ಹಂಚಿನಾಳ ಗ್ರಾಮದ ಆಸೀಫ್ ಜವಳಿ(21), ಮಾಸಾಬಿ(19) ಆತ್ಮಹತ್ಯೆ ಶರಣಾದವರು. ನಿನ್ನೆ ಸಂಜೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆಸೀಫ್, ಮಾಸಾಬಿ ಕಳೆದ ಕೆಲ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮಾಸಾಬಿ ಮನೆಯವರು ಬೇರೆ ಹುಡುಗನ ಜೊತೆ ಮದುವೆ ನಿಶ್ಚಯ ಮಾಡಿದ್ದರು ಎನ್ನಲಾಗ್ತಿದೆ. ಮಾರ್ಚ್ 8ರಂದು ಬೇರೆ ಹುಡುಗನ ಜೊತೆ ಮಾಸಾಬಿಗೆ ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು. ಇದರಿಂದ ಮನನೊಂದು ಆಸೀಫ್, ಮಾಸಾಬಿ ಬಾರದಲೋಕಕ್ಕೆ ತೆರಳಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಭೀಕರ ರಸ್ತೆ ಅಪಘಾತ: ಟ್ರಕ್ ಪಲ್ಟಿಯಾಗಿ 15 ಕೂಲಿ ಕಾರ್ಮಿಕರ ದಾರುಣ ಸಾವು!