ಕರ್ನಾಟಕ

karnataka

ETV Bharat / state

ಬೇರೆಯವರ ಜೊತೆ ನಿಶ್ಚಿತಾರ್ಥ... ಪ್ರೇಯಸಿಯನ್ನೇ ಕೊಂದು ರಸ್ತೆ ಬದಿ ಬಿಸಾಡಿದ ಪ್ರಿಯಕರ! - ಮಹಾರಾಷ್ಟ್ರದ ಇಸ್ಲಾಂಪುರ

ಪ್ರಿಯಕರನೇ ತಾನು ಪ್ರೀತಿಸಿದ ಹುಡುಗಿಯನ್ನು ಬರ್ಬರವಾಗಿ ಕೊಲೆ ಮಾಡಿ ರಸ್ತೆ ಬದಿಯ ಹೊಲದಲ್ಲಿ ಶವವನ್ನು ಎಸೆದಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೋರಗಾಂವವಾಡಿ ಕಸನಾಳ ರಸ್ತೆ ಬದಿಯಲ್ಲಿ ನಡೆದಿದೆ.

ಕೊಲೆಯಾದ ಯುವತಿ

By

Published : Aug 1, 2019, 5:30 PM IST

ಚಿಕ್ಕೋಡಿ: ಯುವತಿಯೊಬ್ಬಳ ತಲೆಗೆ ಕಬ್ಬಿಣದ ರಾಡ್​​ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬಳಿಕ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೋರಗಾಂವವಾಡಿ ಕಸನಾಳ ರಸ್ತೆ ಬದಿಯ ಹೊಲದಲ್ಲಿ ಶವವನ್ನು ಎಸೆಯಲಾಗಿದೆ.

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಯುವತಿ ಕೊಲೆಯಾದವಳು ಎನ್ನಲಾಗಿದೆ. ಆರೋಪಿ ನಿಪ್ಪಾಣಿ ತಾಲೂಕಿನ ಬಾರವಾಡ ಗ್ರಾಮದ ನಿವಾಸಿ ಯೋಗೇಶ ಚೌಗುಲೆ (25). ಯುವತಿಯನ್ನು ಕೊಲೆ ಮಾಡಿದ್ದು ನಾನೇ ಎಂದು ಪೊಲೀಸರ ಎದುರು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಈತನನ್ನು ಸದಲಗಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಿಯತಮೆಯನ್ನು ಕೊಂದ ಪ್ರಿಯಕರ

ಘಟನೆ ವಿವರ :

ಯೋಗೇಶ್‌ ಮತ್ತು ಆ ಯುವತಿ ಮಧ್ಯೆ ಪ್ರೇಮವಿತ್ತಂತೆ. ಆದರೆ ಯುವತಿ ಮನೆಯವರು ಮಹಾರಾಷ್ಟ್ರದ ಇಸ್ಲಾಂಪುರದ ಯುವಕನೊಂದಿಗೆ ಆಕೆಯ ನಿಶ್ಚಿತಾರ್ಥ ನೆರವೇರಿಸಿದ್ದರು. ಇದರಿಂದ ಬೇಸರ ಹಾಗೂ ಆಕ್ರೋಶಗೊಂಡ ಯೋಗೇಶ್‌ ಕೊನೆಯದಾಗಿ ಭೇಟಿಯಾಗೋಣ ಎಂದು ಹೇಳಿ ಆಕೆಯನ್ನು ಕರೆಸಿಕೊಂಡು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details