ಬೆಳಗಾವಿ: ಪಬ್ಜಿ ಗೇಮ್ನಲ್ಲಿ ಪರಿಚಯವಾದ ಹುಡುಗಿಯೊಬ್ಬಳನ್ನು ಪ್ರೀತಿಸಿ ವಂಚಿಸಿದ ಯುವಕನೊಬ್ಬನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ಮೂಲದ ಸತೀಶ್ ಕನ್ಸಾರಾ ಬಂಧಿತ. ಈತ ಪ್ರತಿನಿತ್ಯ ಆನ್ಲೈನ್ನಲ್ಲಿ ಪಬ್ಜಿ ಆಟವಾಡುವಾಗ ಬೆಳಗಾವಿ ಮೂಲದ ಯುವತಿಯ ಪರಿಚಯ ಮಾಡಿಕೊಂಡಿದ್ದ.

ಇಷ್ಟಕ್ಕೆ ನಿಲ್ಲದ ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರು ತಮ್ಮ ಮೊಬೈಲ್ ನಂಬರ್ ಬದಲಿಸಿಕೊಂಡಿದ್ದರು. ಮುಂಬೈನಲ್ಲಿ ಕೆಲಸ ಮಾಡುತ್ತೇನೆ. ಲಕ್ಷಾಂತರ ರೂ ಸಂಬಳ ಪಡೆಯುತ್ತೇನೆ ಎಂದು ಹುಡುಗಿಯನ್ನು ನಂಬಿಸಿದ್ದಾನೆ. ಆತನನ್ನು ನಂಬಿದ ಯುವತಿ, ಅವನ ಕರೆಯಂತೆ ಆತನನ್ನು ಭೇಟಿ ಮಾಡಲು ಮುಂಬೈಗೆ ತೆರಳಿದ್ದಳು. ಎರಡು ದಿನ ಲಾಡ್ಜ್ನಲ್ಲಿ ಆಕೆಯೊಂದಿಗೆ ವಾಸ್ತವ್ಯ ಹೂಡಿದ್ದ. ಈ ವೇಳೆ ಅವಳೊಂದಿಗಿನ ಖಾಸಗಿ ಕ್ಷಣವನ್ನು ಮೊಬೈಲ್ನಲ್ಲಿ ಸೆರೆಹಿಡಿದಿದ್ದ ಸತೀಶ್, ಅಶ್ಲೀಲ ಫೋಟೊ, ವಿಡಿಯೋವನ್ನು ತೋರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಎಂದು ಹೇಳಲಾಗಿದೆ.
ಇದರಿಂದ ಮನನೊಂದ ಯುವತಿ ಬೆಳಗಾವಿ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದಳು. ದೂರು ಆಧಾರಿಸಿ ಆರೋಪಿ ಪತ್ತೆ ಬಲೆ ಬೀಸಿದ ಪೊಲೀಸರು ಗುಜರಾತ್ಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.