ಚಿಕ್ಕೋಡಿ: ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಚಿಕ್ಕೋಡಿ ಉಪವಿಭಾಗದಲ್ಲಿ ಹೆಚ್ವಾಗಿ ಮೆಕ್ಕೆ ಜೋಳ ಬೆಳೆಯುವ ರೈತರಿದ್ದು, ಮುಂಗಾರು ಬೆಳೆ ಬೆಳದ ರೈತರಿಗೆ ಪ್ರವಾಹ ಬಂದು ಕೆಲ ರೈತರು ಬೆಳೆ ಹಾಳಾದರೆ, ಕೆಲ ರೈತರು ಕಟಾವು ಮಾಡುವ ವೇಳೆಗೆ ಕುಂಭದ್ರೋಣ ಮಳೆಯಿಂದಾಗಿ ಲಕ್ಷಾಂತರ ರೂಪಾಯಿ ಮೆಕ್ಕೆ ಜೋಳ ಹಾಳಾಗಿದೆ. ಇನ್ನೂಳಿದ ಅಲ್ಪಸ್ವಲ್ಪ ಉಳಿದ ಮೆಕ್ಕೆಜೋಳಕ್ಕೆ ಮಧ್ಯವರ್ತಿಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ.
ಮೆಕ್ಕೆಜೋಳವನ್ನು ಕ್ವಿಂಟಲ್‌ಗೆ 1,760 ರೂ ಬೆಂಬಲ ಬೆಲೆಯಲ್ಲಿ ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ. ಇಷ್ಟಾದರೂ ಸಹಿತ, ಚಿಕ್ಕೋಡಿ ಉಪವಿಭಾಗಗಳಲ್ಲಿ ಬರುವಂತ ಅಥಣಿ, ಕಾಗವಾಡ, ಚಿಕ್ಕೋಡಿ, ರಾಯಬಾಗ, ಹುಕ್ಕೇರಿ, ನಿಪ್ಪಾಣಿ ತಾಲೂಕಿನಲ್ಲಿ ಮಧ್ಯವರ್ತಿಗಳು ಪ್ರತಿ ಕ್ವಿಂಟಲ್‌ಗೆ 1,300 ರಿಂದ 1,400 ವರೆಗೆ ಖರೀದಿ ಮಾಡುತ್ತಿದ್ದು, ಇದರಿಂದ ರೈತರಿಗೆ 300 ರಿಂದ 400 ವರೆಗೆ ನಷ್ಟ ಅನುಭವಿಸುವಂತಹ ಪ್ರಸಂಗ ಎದುರಾಗಿದೆ.