ಕರ್ನಾಟಕ

karnataka

ETV Bharat / state

ಟೋಲ್ ಸಂಗ್ರಹ ತಪ್ಪಿಸಲು ಕಳ್ಳ ದಾರಿ ಹಿಡಿದ ಲಾರಿ ಚಾಲಕರು - Belagavi Lorry drivers who have taken a different route News

ಹಿರೇಬಾಗೇವಾಡಿಯಲ್ಲಿನ ಟೋಲ್ ಶುಲ್ಕ ತಪ್ಪಿಸುವ ಸಲುವಾಗಿ ಚಿಕ್ಕಬಾಗೇವಾಡಿ ಮತ್ತು ಎಂ.ಕೆ. ಹುಬ್ಬಳ್ಳಿ ನಡುವಿನ ಮಾರ್ಗದಲ್ಲಿ ಭಾರಿ ಗಾತ್ರದ ವಾಹನಗಳು ಸಂಚರಿಸುವ ಮೂಲಕ ಕಳ್ಳ ಮಾರ್ಗವನ್ನು ಹಿಡಿದಿವೆ ಎಂಬ ಆರೋಪವಿದೆ.

ಟೋಲ್ ಸಂಗ್ರಹ ತಪ್ಪಿಸಲು ಕಳ್ಳ ದಾರಿ ಹಿಡಿದ ಲಾರಿ ಚಾಲಕರು
ಟೋಲ್ ಸಂಗ್ರಹ ತಪ್ಪಿಸಲು ಕಳ್ಳ ದಾರಿ ಹಿಡಿದ ಲಾರಿ ಚಾಲಕರು

By

Published : Aug 10, 2020, 10:15 AM IST

ಬೆಳಗಾವಿ : ಭಾರಿ ಗಾತ್ರದ ವಾಹನಗಳು ಟೋಲ್ ಸಂಗ್ರಹ ಶುಲ್ಕ ತಪ್ಪಿಸುವ ಸಲುವಾಗಿ ಕಳ್ಳ ದಾರಿ ಹಿಡಿದು ಸಂಚಾರ ಹಿನ್ನೆಲೆ, ಆ ರಸ್ತೆಯಲ್ಲಿ ರೈತರು ತಮ್ಮ ಜಮೀನುಗಳಿಗೆ ತೆರೆಳಲು ನರಕಯಾತನೆ ಪಡುತ್ತಿದ್ದಾರೆ. ಈ ಸಂಬಂಧ ಅಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪವನ್ನ ರೈತರು ಮಾಡುತ್ತಿದ್ದಾರೆ.

ಹೌದು, ಬೆಳಗಾವಿ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ರೈತರು ಭಾರಿ ಗಾತ್ರದ ವಾಹನ ಸಂಚಾರದಿಂದಾಗಿ ಬೇಸತ್ತು ಹೋಗಿದ್ದಾರೆ. ತಾಲೂಕಿನ ಹಿರೇಬಾಗೆವಾಡಿ ಟೋಲ್ ಸಂಗ್ರಹ ತಪ್ಪಿಸಿ, ಚಿಕ್ಕಬಾಗೇವಾಡಿ ಗ್ರಾಮದ ಮುಖಾಂತರ ಎಂ.ಕೆ.ಹುಬ್ಬಳಿ ಸೇರುವ ಈ ರಸ್ತೆ ಎನ್‌ಎಚ್4 ಹೆದ್ದಾರಿಯನ್ನು ಕೂಡುತ್ತದೆ. ಹೀಗಾಗಿ ಈ ಕಚ್ಚಾ ರಸ್ತೆಯಲ್ಲಿಯೇ 25ರಿಂದ 30ಕ್ಕೂ ಅಧಿಕ ಟನ್ ಭಾರವಿರುವ ಭಾರಿ ಗಾತ್ರದ ಲಾರಿ, ಟಿಪ್ಪರ್‌ಗಳು ಸೇರಿದಂತೆ ಸರಕು ಸಾಗಿಸುವ ವಾಹನಗಳು ಓಡಾಡುತ್ತಿರುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ಕುರಿತು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬ ಆರೋಪವನ್ನು ಅಲ್ಲಿನ ಗ್ರಾಮಸ್ಥರು ಮಾಡುತ್ತಿದ್ದಾರೆ.

ಟೋಲ್ ಸಂಗ್ರಹ ತಪ್ಪಿಸಲು ಕಳ್ಳ ದಾರಿ ಹಿಡಿದ ಲಾರಿ ಚಾಲಕರು

ಟೋಲ್ ಸಂಗ್ರಹ ತಪ್ಪಿಸಿ ಕಳ್ಳ ದಾರಿ ಹಿಡಿದ ಲಾರಿಗಳು: ಹಿರೇಬಾಗೇವಾಡಿಯಲ್ಲಿನ ಟೋಲ್ ಶುಲ್ಕವನ್ನು ತಪ್ಪಿಸುವ ಸಲುವಾಗಿ ಚಿಕ್ಕಬಾಗೇವಾಡಿ ಮತ್ತು ಎಂ.ಕೆ.ಹುಬ್ಬಳ್ಳಿ ನಡುವಿನ ಮಾರ್ಗದಲ್ಲಿ ಭಾರಿ ಗಾತ್ರದ ವಾಹನಗಳು ಸಂಚರಿಸುವ ಮೂಲಕ ಕಳ್ಳ ಮಾರ್ಗವನ್ನು ಹಿಡಿದಿವೆ ಎಂಬ ಆರೋಪವಿದೆ.

ಇದರಿಂದಾಗಿ ರೈತರ ಓಡಾಡುವ ಈ ಕಚ್ಚಾ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು ಸಂಚರಿಸುವುದರಿಂದ ರಸ್ತೆಯಲ್ಲಿಯೇ ದೊಡ್ಡಪ್ರಮಾಣದಲ್ಲಿ ತೆಗ್ಗು ಗುಂಡಿಗಳು ಬಿದ್ದು, ಹಾಳಾಗಿ ಹೋಗಿದೆ. ಇದರಿಂದಾಗಿ ರೈತರು ಎತ್ತಿನ ಬಂಡಿಗಳು ಸೇರಿ ನಡೆದುಕೊಂಡು ಹೋಗಲು ಕಷ್ಟವಾಗುತ್ತಿದೆ. ಹೀಗಾಗಿ ಆದಷ್ಟೂ ಬೇಗ ರಸ್ತೆ ದುರಸ್ತಿ ಮಾಡುವ ಮೂಲಕ ಕಳ್ಳ ದಾರಿ ಹಿಡಿದಿರುವ ದೊಡ್ಡ ಪ್ರಮಾಣದ ವಾಹನಗಳಿಗೆ ತಡೆ ನೀಡಬೇಕು ಎಂಬುವುದು ರೈತರ ಒತ್ತಾಸೆಯಾಗಿದೆ.

ವರ್ಷದಲ್ಲಿ ಹಾಳಾದ ರಸ್ತೆ: ಹಿರೇಬಾಗೇವಾಡಿ ಶುಲ್ಕ ಸಂಗ್ರಹ ಟೋಲ್ ತಪ್ಪಿಸಿ ನಿತ್ಯ ಈ ರಸ್ತೆಯ ಮೂಲಕ ಸಾವಿರಾರು ಭಾರಿ ಗಾತ್ರದ ವಾಹನಗಳು ಸಂಚಾರ ಮಾಡುತ್ತಿವೆ. ಇದರಿಂದಾಗಿ ಕಳೆದ ವರ್ಷವೇ ಮಾಡಿದ ಡಾಂಬರಿಕರಣ ಕಿತ್ತು ಹೋಗಿದೆ, ತೆಗ್ಗು ಗುಂಡಿಗಳಿಂದ ಬೆಳೆಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಪರಿಣಾಮ, ರೈತರು ಬೆಳೆದ ಬೆಳೆಗಳು ಹೊಲದಲ್ಲಿಯೇ ಕೊಳೆಯುವಂತಾಗಿದ್ದು, ಇನ್ನು ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಅಪಾಯ ಗ್ಯಾರೆಂಟಿ. ಕಳ್ಳ ಮಾರ್ಗ ಹಿಡಿದು ಬರುವ ವಾಹನಗಳನ್ನು ನಿಲ್ಲಿಸಿ, ರಸ್ತೆ ಅಭಿವೃದ್ಧಿಪಡಿಸಬೇಕು ಎಂಬುವುದು ರೈತರ ಆಗ್ರಹವಾಗಿದೆ.

ABOUT THE AUTHOR

...view details