ಚಿಕ್ಕೋಡಿ : ಕಟ್ಟಿಗೆ ತುಂಬಿದ್ದ ಲಾರಿಯೊಂದು ರಸ್ತೆ ಪಕ್ಕದ ಮನೆಗೆ ನುಗ್ಗಿದ್ದರಿಂದ ಬೈಕ್ ಸವಾರ ಹಾಗೂ ಮನೆಯಲ್ಲಿದ್ದ ಜಾನುವಾರುಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಬಾಗ ತಾಲೂಕಿನ ಹೊರವಲಯದಲ್ಲಿ ಸಂಭವಿಸಿದೆ.
ಮನೆಗೆ ನುಗ್ಗಿದ ಲಾರಿ : ಬೈಕ್ ಸವಾರ, ಜಾನುವಾರು ಸಾವು - etv bharat
ನಿಯಂತ್ರಣ ತಪ್ಪಿ ಮನೆಗೆ ಉಗ್ಗಿತು ಕಟ್ಟಿಗೆ ತುಂಬಿದ್ದ ಲಾರಿ. ಮನೆ ಸಂಪೂರ್ಣ ಕುಸಿತ. ಬೈಕ್ ಸವಾರ, ಜಾನುವಾರುಗಳು ಸಾವು. ರಾಯಬಾಗ ತಾಲೂಕಲ್ಲಿ ದುರ್ಘಟನೆ.
ರಾಯಬಾಗ-ಚಿಕ್ಕೋಡಿ ಮುಖ್ಯ ರಸ್ತೆಯ ಕಳ್ಳಿಕೋಡಿ ಸ್ಟಾಪ್ ಬಳಿ ಘಟನೆ ಸಂಭವಿಸಿದೆ. ಲಾರಿ ಮನೆಯತ್ತ ರಭಸವಾಗಿ ನುಗ್ಗುತ್ತಿದ್ದ ವೇಳೆ ರಾಯಬಾಗ ಕಡೆ ತೆರಳುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ನಲ್ಲಿ ಬರುತ್ತಿದ್ದ ಬಾವನ ಸವದತ್ತಿಯ ರಾಜು ಸಿದ್ದಪ್ಪ ಖೋತ (35) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇನ್ನು ಮನೆಯವರು ಸಂತೆಗೆ ಹೋಗಿದ್ದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಲಾರಿ ನುಗ್ಗಿದ ಮನೆಯು ಮಲ್ಲಪ್ಪ ರಾಮಪ್ಪ ರಂಗಣ್ಣವರ ಎಂಬುವರಿಗೆ ಸೇರಿದ್ದು ಸಂಪೂರ್ಣ ಕುಸಿದಿದೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.