ಚಿಕ್ಕೋಡಿ:ಲಾರಿ ದುರ್ಗಾಮಾತಾ ಮೆರವಣಿಗೆ ವೇಳೆ ಭಾರಿ ದುರಂತವೊಂದು ನಡೆದಿದೆ. ಜನರ ಗುಂಪಿನ ಮೇಲೆ ಲಾರಿ ಹರಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, 5 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ, ಬೆಳಗಾವಿ ಜಿಲ್ಲೆಯ ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಹಾರಾಷ್ಟ್ರದ ಗಣೇಶವಾಡಿ ಗ್ರಾಮದ ಸಂಜಯ ರಾವಸಾಬ ಪಾಟೀಲ್(40), ಸಚಿನ್ ಕರಗೌಡ ಪಾಟೀಲ್(35) ಹಾಗೂ ಎರಡು ವರ್ಷದ ಬಾಲಕ ಹನಸೇನ ಗೂಳಪ್ಪನವರ ರಸ್ತೆ ಅಪಘಾತಕ್ಕೆ ಬಲಿಯಾದವರು. ಇನ್ನು, ದುರ್ಘಟನೆಯಲ್ಲಿ 5 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.