ಬೆಳಗಾವಿ:ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಆಶ್ರಯದಲ್ಲಿ ಮಾ.27 ರಂದು ಇಡೀ ಜಿಲ್ಲೆಯಲ್ಲಿ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳ ಬೃಹತ್ ಲೋಕ್ ಅದಾಲತ್ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ ನ್ಯಾಯಾಧೀಶ ಸಿ.ಎಂ ಜೋಶಿ ಹೇಳಿದ್ದಾರೆ.
ನಗರದ ಹೊಸ ನ್ಯಾಯಾಲಯದ ಸಂಕೀರ್ಣದಲ್ಲಿ ಮಾತನಾಡಿದ ಅವರು, ನಿವೃತ್ತ ನ್ಯಾಯಾವಾದಿಗಳ ಸೇವೆಯನ್ನು ಬಳಸಿಕೊಂಡು ರಾಜಿಸಂಧಾನದ ಮಾತುಕತೆ ಮೂಲಕ ಲೋಕ ಅದಾಲತ್ ಮಾಡುತ್ತೇವೆ. ಕ್ರಿಮಿನಲ್ ಪ್ರಕರಣಗಳಲ್ಲಿ ಕೆಲ ಪ್ರಕರಣಗಳು ಹಾಗೂ ವಿಚ್ಛೇದನ ಕೇಸ್ಗಳನ್ನು ಬಿಟ್ಟು ಉಳಿದೆಲ್ಲ ಪ್ರಕರಣಗಳನ್ನು ರಾಜಿಸಂಧಾನ ಮಾಡಲಾಗುವುದು. ಈ ಸಂಬಂಧ ಈಗಾಗಲೇ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡಲಾಗಿದೆ.
ಚೆಕ್ ಬೌನ್ಸ್, ಎಂಎಂಡಿಆರ್ ಅಫೆನ್ಸ್, ಕೌಟುಂಬಿಕ ಕಲಹ, ಸರ್ಕಾರಿ ಇಲಾಖೆಗಳ ಭೂಸ್ವಾಧೀನ ಪ್ರಕರಣಗಳನ್ನು ಇತ್ಯರ್ಥಪಡಿಸಲು ವಿಶೇಷ ಪ್ರಯತ್ನ ಮಾಡುತ್ತೇವೆ ಎಂದರು.