ಚಿಕ್ಕೋಡಿ: ಲಾಕ್ಡೌನ್ ವೇಳೆ ಯಾವುದು ಹಗಲು ಯಾವುದು ರಾತ್ರಿ ಎನ್ನುವುದನ್ನು ತಿಳಿಯದೇ ಕಾರ್ಯ ನಿರ್ವಹಿಸಿದ ಪೊಲೀಸರು ಇದೀಗ ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾರೆ. ತಮ್ಮ ಕುಟುಂಬಗಳೊಂದಿಗೆ ಆಟ ಆಡಿ ಕಾಲ ಕಳೆಯುತ್ತಿದ್ದಾರೆ.
ಲಾಕ್ಡೌನ್ ರಿಲ್ಯಾಕ್ಸ್: ಹಾರ್ಮೋನಿಯಂ ನುಡಿಸಿ ಆಯಾಸ ಕಳೆಯುತ್ತಿರುವ ಹುಕ್ಕೇರಿ ಪಿಎಸ್ಐ - ಹುಕ್ಕೇರಿ ಪೊಲೀಸ್ ಠಾಣೆಯ ಪಿಎಸ್ಐ ಶಿವಾನಂದ ಗುಡಗನಟ್ಟಿ
ಕೊರೊನಾ ನಡುವೆ ಹುಕ್ಕೇರಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿರುವ ಪಿಎಸ್ಐ ಶಿವಾನಂದ ಗುಡಗನಟ್ಟಿ ತಮ್ಮ ಬಿಡುವಿನ ವೇಳೆಯಲ್ಲಿ ದೈನಂದಿನ ಜಂಜಾಟಗಳನ್ನು ಮರೆತು ಅದ್ಭುತವಾಗಿ ಹಾರ್ಮೋನಿಯಂ ನುಡಿಸುತ್ತಾರೆ.
ಹಾರ್ಮೋನಿಯಂ ನುಡಿಸಿ ಆಯಾಸ ಕಳೆಯುತ್ತಿರುವ ಹುಕ್ಕೇರಿ ಪಿಎಸ್ಐ
ಲಾಕ್ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿ ತಮ್ಮ 2 ವರ್ಷದ ಮಗಳು ಆಸ್ಪತ್ರೆಯಲ್ಲಿ ದಾಖಲಿದ್ದರೂ, ತಮ್ಮ ಪತ್ನಿಯನ್ನ ಆಸ್ಪತ್ರೆಯಲ್ಲಿ ಬಿಟ್ಟು ಲಾಕ್ಡೌನ್ ಕರ್ತವ್ಯ ನಿರ್ವಹಿಸಿ ಹುಕ್ಕೇರಿ ಜನರ ಮೆಚ್ಚುಗೆಗೆ ಕಾರಣವಾಗಿದ್ದರು. ಇವರ ಕರ್ತವ್ಯ ನಿರ್ವಹಣೆ ಹಾಗೂ ಸರಳತೆಗೆ ಜನತೆ ಮತ್ತೊಮ್ಮೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Last Updated : Jun 7, 2020, 2:46 PM IST