ಬೆಳಗಾವಿ :ಇಡೀ ದೇಶದಲ್ಲೇಲಾಕ್‌ಡೌನ್ ಆದೇಶವಿದ್ದರೂ ಗಡಿ ಜಿಲ್ಲೆಯಲ್ಲಿ ಮಾತ್ರ ವಿವಿಧ ಮಾರುಕಟ್ಟೆಗಳಲ್ಲಿ ಜನಜಂಗುಳಿ ನೆರೆದಿರುವ ದೃಶ್ಯ ಕಂಡು ಬಂತು.
ಬೆಳಗಾವಿಯಲ್ಲಿ ಲಾಕ್‌ಡೌನ್ ಆದೇಶ ಉಲ್ಲಂಘನೆ.. ಮಾರುಕಟ್ಟೆಗಳಲ್ಲಿ ಜನಜಂಗುಳಿ.. - Sante in Yadavada village of Gokak Taluk
ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮಾರುಕಟ್ಟೆಯಲ್ಲಿ ಖರೀದಿ ಹಾಗೂ ಮಾರಾಟದ ಭರಾಟೆ ಜೋರಾಗಿದೆ.
ಬೆಳಗಾವಿಯಲ್ಲಿ ಲಾಕ್ ಡೌನ್ ಆದೇಶ ಉಲ್ಲಂಘನೆ
ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಏಪ್ರಿಲ್ 14ರವರೆಗೂ ಲಾಕ್‌ಡೌನ್ ಆದೇಶವಿದೆ. ಆದರೂ ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಗೋಕಾಕ್ ತಾಲೂಕಿನ ಯಾದವಾಡ ಗ್ರಾಮದಲ್ಲಿ ಸಂತೆ ನಡೆಸಲಾಗಿದೆ. ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮಾರುಕಟ್ಟೆಯಲ್ಲಿ ಖರೀದಿ ಹಾಗೂ ಮಾರಾಟದ ಭರಾಟೆ ಜೋರಾಗಿದೆ.
ನಗರದ ಹಣ್ಣು ಮಾರುಕಟ್ಟೆಯಲ್ಲಿ ಕೂಡ ಜನಜಂಗುಳಿ ನೆರೆದಿದೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಪಕ್ಕದಲ್ಲಿರುವ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಹಣ್ಣು ಖರೀದಿಸಲು ಚಿಲ್ಲರೆ ವ್ಯಾಪಾರಿಗಳು ಮುಗಿಬಿದ್ದ ದೃಶ್ಯ ಕಂಡುಬಂತು.