ಚಿಕ್ಕೋಡಿ: ಲಾಕ್‌ಡೌನ್ ಹಿನ್ನೆಲೆ ತುತ್ತು ಅನ್ನಕ್ಕಾಗಿ ಕಳೆದ 45 ದಿನಗಳಿಂದ ಗಡಿಯ ಅರಣ್ಯ ಪ್ರದೇಶದಲ್ಲೇ ಸಿಲುಕಿಕೊಂಡಿರುವ 10 ಕುಟುಂಬಗಳ 47 ಜನರು ಪರದಾಡುತ್ತಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ನಂದಗಡ ತಾಲೂಕಿನ ತೆವುರವಾಡಿ ಗ್ರಾಮದಲ್ಲಿ ಸಿಲುಕಿರುವ ಮಧ್ಯಪ್ರದೇಶದ ಅಲೆಮಾರಿಗಳಾದ ಇವರು, ಗೋವಾದಿಂದ ಮಧ್ಯಪ್ರದೇಶದ ಜಬಲ್ಪೂರ್ ಜಿಲ್ಲೆಗೆ ಹೊರಟು, ಕಾಲ್ನಡಿಗೆಯಲ್ಲಿ ರಾಜ್ಯದ ಗಡಿಯವರೆಗೆ ಬಂದಿದ್ದಾರೆ. ಲಾಕ್‌ಡೌನ್ ಜಾರಿ ಹಿನ್ನೆಲೆ ಈ ಗ್ರಾಮದ ಬಳಿಯೇ ಸಿಲುಕಿದ್ದಾರೆ.
ಲಾಕ್‌ಡೌನ್ ಎಫೆಕ್ಟ್... ಅರಣ್ಯದಲ್ಲೇ ಸಿಲುಕಿಕೊಂಡ ಅಲೆಮಾರಿ ಜನ, ತುತ್ತು ಅನ್ನಕ್ಕೂ ಪರದಾಟ - ತುತ್ತು ಅನ್ನಕ್ಕಾಗಿ ಕಳೆದ 45 ದಿನಗಳಿಂದ ಗಡಿಯ ಅರಣ್ಯ ಪ್ರದೇಶದಲ್ಲೇ ಸಿಲುಕಿದ ಅಲೆಮಾರಿಗಳು
ತಾಲೂಕಿನ ತೆವುರವಾಡಿ ಗ್ರಾಮದಲ್ಲಿ ಸಿಲುಕಿರುವ ಮಧ್ಯಪ್ರದೇಶದ ಅಲೆಮಾರಿಗಳಾದ ಇವರು, ಗೋವಾದಿಂದ ಮಧ್ಯಪ್ರದೇಶದ ಜಬಲ್ಪೂರ್ ಜಿಲ್ಲೆಗೆ ಹೊರಟು, ಕಾಲ್ನಡಿಗೆಯಲ್ಲಿ ರಾಜ್ಯದ ಗಡಿಯವರೆಗೆ ತಲುಪಿದ್ದಾರೆ. ಲಾಕ್‌ಡೌನ್ ಜಾರಿ ಹಿನ್ನೆಲೆ ಈ ಗ್ರಾಮದ ಬಳಿಯೇ ಸಿಲುಕಿಕೊಂಡಿದ್ದು ಮಕ್ಕಳಿಂದ ಹಿಡಿದು ದೊಡ್ಡವರೂ ಸಹ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ.
ಮಹಾರಾಷ್ಟ್ರದ ತೆವುರವಾಡಿ ಗ್ರಾಮದ ಹೊರವಲಯದ ಅರಣ್ಯದಲ್ಲೇ ಉಳಿದ ಮಕ್ಕಳು, ವೃದ್ಧರು ಸೇರಿದಂತೆ 47 ಜನರು ಗೋವಾದ ಊರುಗಳಿಗೆ ತೆರಳಿ ವನಸ್ಪತಿ, ಜೇನುತುಪ್ಪ ಮಾರಾಟ ಹಾಗೂ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ ಈ ಕೊರೊನಾ ಭೀತಿ ಹಿನ್ನೆಲೆ ಗ್ರಾಮಕ್ಕೆ ಯಾರೂ ಕೂಡ ಇವರನ್ನು ಸೇರಿಸುತ್ತಿಲ್ಲ. ಹೀಗಾಗಿ ಅರಣ್ಯದಲ್ಲೇ ಹಣ್ಣು, ಕಾಯಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ ಈ ಬಡಪಾಯಿಗಳು.
ಆಹಾರವಿಲ್ಲದೇ ಅಲೆಮಾರಿ ಮಕ್ಕಳು, ವೃದ್ಧರು, ಮಹಿಳೆಯರು ಪರಾದಾಡುತ್ತಿದ್ದು, ಜಿಲ್ಲೆಯ ಹುಕ್ಕೇರಿ ಪಟ್ಟಣ ಹಾಗೂ ಗಡಿ ಗ್ರಾಮಗಳ ಜನರು ಆಹಾರ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ನಮ್ಮನ್ನು ನಮ್ಮೂರಿಗೆ ಕಳುಹಿಸಿ ಎಂದು ಪರಿ ಪರಿಯಾಗಿ ಮನವಿ ಮಾಡಿಕೊಂಡಿದ್ದಾರೆ.
TAGGED:
Lockdown Effect