ಬೆಳಗಾವಿ: ಕೊರೊನಾ ಲಾಕ್ಡೌನ್ ಇದ್ರೂ ಅನಗತ್ಯವಾಗಿ ರಸ್ತೆಗಳಿದ ಸೀಜ್ ಮಾಡಿರುವ ಆಟೋ ಸ್ಟಾರ್ಟ್ ಮಾಡಲು ಪೊಲೀಸರು ಹರಸಾಹಸಪಟ್ಟಿರುವ ಘಟನೆ ನಡೆಯಿತು.
ನಗರದ ಚೆನ್ನಮ್ಮ ವೃತ್ತದಲ್ಲಿ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಆಟೋ ಚಾಲಕನೊಬ್ಬ ತನ್ನ ಆಟೋದ ಮೇಲೆ ವೆಜಿಟೇಬಲ್ ವೆಹಿಕಲ್ ಎಂದು ಸ್ಟಿಕ್ಕರ್ ಅಂಟಿಸಿ ಓಡಾಡುತ್ತಿದ್ದ. ಇದನ್ನು ಗಮನಿಸಿದ ಪೊಲೀಸರು ಆಟೋ ನಿಲ್ಲಿಸಿ, ಸೀಜ್ ಮಾಡಿದರು.
ಆಟೋ ಸ್ಟಾರ್ಟ್ ಮಾಡಲು ಪೊಲೀಸರ ಹರಸಾಹಸ ಸೀಜ್ ಮಾಡಿದ ಆಟೋ ಸ್ಟಾರ್ಟ್ ಮಾಡಲು ಪೊಲೀಸರು ಹರಸಾಹಸಪಟ್ಟರು. ಈ ವೇಳೆ ಆಟೋ ಚಾಲಕ ಕಾಲಿಗೆ ಬೀಳ್ತಿನಿ, ಓನರ್ ಬೈತಾರೆ ತಪ್ಪಾಯ್ತು, ಆಟೋ ಕೊಡಿ ಸಾರ್ ಎಂದು ಚಾಲಕ ಮನವಿ ಮಾಡಿಕೊಂಡರು. ಆದ್ರೂ ಪ್ರಯೋಜನವಾಗಲಿಲ್ಲ.
ಆಟೋ ಸ್ಟಾರ್ಟ್ ಮಾಡಿ ಕೊಡ್ತೀವಿ ಎಂದು ಸಿಪಿಐ ಪ್ರಭಾಕರ್ ಧರ್ಮಟ್ಟಿ ಹೇಳಿದ್ದಾರೆ. ಬಳಿಕ ಆಟೋ ಸ್ಟಾರ್ಟ್ ಮಾಡಿದ ಪೊಲೀಸರು, ನೇರವಾಗಿ ಸ್ಟೇಷನ್‌ಗೆ ಒಯ್ದರು. ಬಳಿಕ ಆಟೋ ಚಾಲಕ ನಡೆದುಕೊಂಡು ಕ್ಯಾಂಪ್ ಪೊಲೀಸ್ ಠಾಣೆಗೆ ಹೋದರು.