ಅಥಣಿ (ಬೆಳಗಾವಿ):ತಹಶೀಲ್ದಾರರು ಕಾರು ಚಾಲಕನ ಮೇಲೆ ಟ್ರ್ಯಾಕ್ಟರ್ ಹಾಯಿಸಿ ಕೊಲೆ ಪ್ರಯತ್ನ ಮಾಡಿರುವ ಘಟನೆ ಅಥಣಿ ತಾಲೂಕಿನ ಶಿರೂರ - ಬಳೆಗಾಂವದ ಬಳಿ ನಡೆದಿತ್ತು. ಸದ್ಯ ಈ ಆರೋಪಿಯನ್ನು ಅಥಣಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಥಣಿ ತಾಲೂಕಿನ ಶಿರೂರ - ಬಳೆಗಾಂವ ಮಧ್ಯದ ಹಳ್ಳದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿದ್ದಾಗ ಅಥಣಿ ತಹಶೀಲ್ದಾರರು ಮತ್ತು ಅವರ ಚಾಲಕ ಅನಿಲ್ ಮಲ್ಲಪ್ಪ ಗಸ್ತಿ ಹಾಗೂ ಆರ್.ವಿ. ಕಲಾಟೆ ರವರೊಂದಿಗೆ ದಾಳಿ ನಡೆಸಿದ್ದರು. ಈ ವೇಳೆ ತಹಶೀಲ್ದಾರ್ ಮತ್ತು ಅವರ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಒತ್ತಾಯಪೂರ್ವಕವಾಗಿ ಟ್ರ್ಯಾಕ್ಟರ್ ಅನ್ನು ತೆಗೆದುಕೊಂಡು ಹೋಗುವಾಗ ತಹಶೀಲ್ದಾರ್ ಚಾಲಕನ ಮೇಲೆ ವಾಹನ ಚಲಾಯಿಸಲು ಪ್ರಯತ್ನಿಸಲಾಗಿತ್ತು.