ಚಿಕ್ಕೋಡಿ:ಕಳೆದ ನಾಲ್ಕೈದು ವರ್ಷಗಳಿಂದ ಚರಂಡಿ ನೀರು ರಸ್ತೆ ಮೇಲೆ ಹರಿದು ಹೋಗುತ್ತಿದ್ದು, ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿ, ಜನಪ್ರತಿನಿಧಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ನಾವೇ ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ಮಾಡಿ ಕೊಟ್ಟಂತಾಗುತ್ತಿದೆ ಎಂದು ಗ್ರಾಮದ ಸ್ಥಳೀಯರು ಅಳಲು ತೊಡಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜೂಗಳ ಗ್ರಾಮದ ಒಂದನೇ ವಾರ್ಡ್‌ನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಚರಂಡಿ ಇಲ್ಲದೇ ರಸ್ತೆಯ ಮೇಲೆ ಸ್ನಾನದ ನೀರು, ಶೌಚಾಲಯದ ನೀರು ಹರಿದು ಹೋಗುತ್ತಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಿಗೆ ತಿಳಿಸಿದರೆ ಹಣ ಇಲ್ಲ ಹಾಗೂ ಗ್ರಾಮ ಪಂಚಾಯತಿ ಮೇಲೆ ಸ್ಟೇ ಇದೆ ಎಂದು ಹೇಳುತ್ತಿದ್ದಾರೆ. ಸ್ಟೇ ಬಗ್ಗೆ ಕೇಳಿದರೆ ಯಾವುದೇ ದಾಖಲಾತಿ ನೀಡುತ್ತಿಲ್ಲ ಎಂದು ಸ್ಥಳೀಯ ನಿವಾಸಿ ದಾದಾ ಕಲ್ಲಪ್ಪ ವಶೆದಾರ ಆರೋಪಿಸಿದ್ದಾರೆ.