ಬೆಳಗಾವಿ: ಜಿಲ್ಲಾ ಬಿಜೆಪಿ ಗ್ರಾಮ ಸ್ವರಾಜ್ಯ ಸಮಾವೇಶ ಕಾರ್ಯಕ್ರಮದ ಬ್ಯಾನರನಲ್ಲಿ ಸ್ಥಳೀಯ ಶಾಸಕರ ಪೋಟೋಗಳು ಮಾಯವಾಗಿದ್ದು, ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಚರ್ಚೆ ಕಾರ್ಯಕರ್ತರಲ್ಲಿ ಜೋರಾಗಿ ನಡೆಯುತ್ತಿದೆ.
ಬಿಜೆಪಿ ಗ್ರಾಮ ಸ್ವರಾಜ್ಯ ಸಮಾವೇಶ: ಬ್ಯಾನರ್ನಲ್ಲಿ ಸ್ಥಳೀಯ ನಾಯಕರ ಫೋಟೊ ಮಾಯ - ಸ್ಥಳೀಯ ನಾಯಕರು ಸಮಾವೇಶದಲ್ಲಿ ಗೈರು
ಬೆಳಗಾವಿಯ ರಾಮನಗರದಲ್ಲಿ ನಡೆಯುತ್ತಿರುವ ಗ್ರಾಮ ಸ್ವರಾಜ್ಯ ಸಮಾವೇಶ ಕಾರ್ಯಕ್ರಮದ ಬ್ಯಾನರ್ನಲ್ಲಿ ಸ್ಥಳೀಯ ಶಾಸಕರಾದ ಅಭಯ್ ಪಾಟೀಲ, ಅನಿಲ ಬೆನಕೆ, ಪಿ.ರಾಜೀವ್, ಮಹೇಶ ಕುಮಟಳ್ಳಿ ಹಾಗೂ ಉಮೇಶ ಕತ್ತಿ ಪೋಟೋಗಳನ್ನು ಹಾಕಿಲ್ಲ. ಇದರಿಂದ ಪಕ್ಷದ ಕಾರ್ಯಕರ್ತರಲ್ಲಿ ಚರ್ಚೆ ಶುರುವಾಗಿದೆ.
![ಬಿಜೆಪಿ ಗ್ರಾಮ ಸ್ವರಾಜ್ಯ ಸಮಾವೇಶ: ಬ್ಯಾನರ್ನಲ್ಲಿ ಸ್ಥಳೀಯ ನಾಯಕರ ಫೋಟೊ ಮಾಯ ಗ್ರಾಮ ಸ್ವರಾಜ್ಯ ಸಮಾವೇಶ ಬ್ಯಾನರ್](https://etvbharatimages.akamaized.net/etvbharat/prod-images/768-512-9738186-thumbnail-3x2-bngjpg.jpg)
ಇಲ್ಲಿನ ರಾಮನಗರದಲ್ಲಿ ನಡೆಯುತ್ತಿರುವ ಗ್ರಾಮ ಸ್ವರಾಜ್ಯ ಸಮಾವೇಶ ಕಾರ್ಯಕ್ರಮದ ಬ್ಯಾನರ್ನಲ್ಲಿ ಸ್ಥಳೀಯ ಶಾಸಕರಾದ ಅಭಯ್ ಪಾಟೀಲ, ಅನಿಲ ಬೆನಕೆ, ಪಿ.ರಾಜೀವ್, ಮಹೇಶ ಕುಮಟಳ್ಳಿ ಹಾಗೂ ಉಮೇಶ ಕತ್ತಿ ಫೋಟೋಗಳು ಮಾಯವಾಗಿದ್ದು, ಅದಕ್ಕೆ ಪುಷ್ಟಿ ಎಂಬಂತೆ ಕಾರ್ಯಕ್ರಮದಲ್ಲಿ ಶಾಸಕರಾದ ಅನಿಲ ಬೆನಕೆ, ಅಭಯ್ ಪಾಟೀಲ ಗೈರಾಗಿದ್ದಾರೆ.
ಗ್ರಾಮ ಪಂಚಾಯಿತಿ ಸಮಾವೆಶದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕೆಂಬ ಉದ್ದೇಶದಿಂದ ಬಿಜೆಪಿ ಗ್ರಾಮ ಸ್ವರಾಜ್ಯ ಸಮಾವೇಶ ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ವಿಧಾನ ಸಭೆ ಸಚೇತಕ ಮಹಾಂತೇಶ ಕವಟಗಿಮಠ ಸೇರಿದಂತೆ ಹಲವು ವಿವಿಧ ನಿಗಮಗಳ ಅಧ್ಯಕ್ಷರು ಭಾಗಿಯಾಗಿದ್ದರು.