ಬೆಳಗಾವಿ: ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪಿಆರ್‌ಒ (ಪೋಲಿಂಗ್ ರಿಟರ್ನಿಂಗ್ ಆಫೀಸರ್) ಬಳಿ ಲೋಡೆಡ್ ಪಿಸ್ತೂಲ್ ಪತ್ತೆಯಾಗಿದೆ. ತಾಲೂಕಿನ ದೇಸೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ದೇಸೂರ ಗ್ರಾಮದ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿ ಬಳಿ ನಿನ್ನೆ ರಾತ್ರಿ ಈ ಲೋಡೆಡ್ ಪಿಸ್ತೂಲ್ ಪತ್ತೆಯಾಗಿದೆ. ಪಿಆರ್‌ಒ ಆಗಿದ್ದ ಸುಲೇಮಾನ್ ಸನದಿ ಬಳಿ ಪಿಸ್ತೂಲ್ ಕಂಡುಬಂದಿದೆ. ಮತಗಟ್ಟೆಗೆ ಆಗಮಿಸುವಾಗ ಲೋಡೆಡ್ ಪಿಸ್ತೂಲ್ ಜೊತೆಗೆ ಸುಲೇಮಾನ್ ಸನದಿ ಆಗಮಿಸಿದ್ದರು. ಇದನ್ನು ಗಮನಿಸಿದ ಚುನಾವಣಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.