ಬೆಳಗಾವಿ:ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿ 51 ಮಕ್ಕಳು ಅಸ್ವಸ್ಥರಾದ ಘಟನೆ ಬೆಳಗಾವಿ ತಾಲೂಕಿನ ಹೊಸವಂಟಮೂರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಶಾಲಾ ಬಿಸಿಯೂಟದಲ್ಲಿ ಹಲ್ಲಿ... 51 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು - undefined
ಹಲ್ಲಿ ಬಿದ್ದಿರುವ ಬಿಸಿಯೂಟ ಸೇವನೆಯಿಂದ 51 ಮಕ್ಕಳು ಅಸ್ವಸ್ಥರಾಗಿದ್ದಾರೆ. ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
![ಶಾಲಾ ಬಿಸಿಯೂಟದಲ್ಲಿ ಹಲ್ಲಿ... 51 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು](https://etvbharatimages.akamaized.net/etvbharat/prod-images/768-512-3855335-thumbnail-3x2-bgm.jpg)
ಮಕ್ಕಳು
ಬಿಸಿಯೂಟದಲ್ಲಿ ಹಲ್ಲಿ ಬಿದ್ದಿರುವುದು ಗೊತ್ತಾಗದೆ ಮಕ್ಕಳು ಊಟ ಸೇವಿಸಿದ್ದಾರೆ. ಹೀಗಾಗಿ ಊಟದ ನಂತರ ಹೊಟ್ಟೆನೋವಿನಿಂದ ಬಳಲುತ್ತಿರುವ ಮಕ್ಕಳನ್ನ ಶಾಲಾ ಶಿಕ್ಷಕರು ಮಕ್ಕಳನ್ನ ಆಸ್ಪತ್ರೆಗೆ ಸಾಗಿಸಿದರು. ಅಸ್ವಸ್ಥಗೊಂಡ ಮಕ್ಕಳಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
51 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಘಟನೆಯಿಂದ ಆತಂಕಗೊಂಡ ಪೋಷಕರು ಶಾಲೆಯತ್ತ ಧಾವಿಸಿದರು. ಮಕ್ಕಳನ್ನು ಆಂಬುಲೆನ್ಸ್ನಲ್ಲಿ ಸಾಗಿಸಲು ಶಿಕ್ಷಕರಿಗೆ ನೆರವು ನೀಡಿದರು. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Last Updated : Jul 16, 2019, 8:11 PM IST